
ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಕಾರಣ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ…!
ಬೀನ್ಸ್ ದರ ಕೆಜಿಗೆ 200 ರೂಪಾಯಿ ತಲುಪಿದೆ. ಬಿಳಿ ಬದನೆಕಾಯಿ 66 ರೂ, ಬಾಟಲ್ ಬದನೆ 60 ರೂ, ಸೌತೆಕಾಯಿ 48 ರೂ, ನುಗ್ಗೆಕಾಯಿ 44 ರೂ, ಬೆಳ್ಳುಳ್ಳಿ 294 ರೂ, ಹಾಗಲಕಾಯಿ 59 ರೂ, ಬೆಂಡೆಕಾಯಿ 60 ರೂ, ವರೆಗೆ ಏರಿಕೆ ಆಗಿದೆ…!!
ಸೊಪ್ಪುಗಳ ದರ ಕೂಡ ಏರಿಕೆಯಾಗಿದ್ದು, ನಾಟಿ ಕೊತಂಬರಿಸೊಪ್ಪು ಕಂತೆಗೆ 25 ರೂಪಾಯಿ ವರೆಗೆ ಮಾರಾಟವಾಗಿದೆ, ದಂಟು, ಪಾಲಕ್, ಮೆಂತೆ ಸೊಪ್ಪಿನ ದರ 20ರಿಂದ 25 ರೂಪಾಯಿವರೆಗೆ ಏರಿಕೆಯಾಗಿದೆ, ತೆಂಗಿನ ಕಾಯಿ ದರ 40 ರಿಂದ 54 ರೂ ವರೆಗೆ ಏರಿಕೆ ಕಂಡಿದೆ, ಮಧ್ಯಮ ಗಾತ್ರದ ತೆಂಗಿನ ಕಾಯಿ 33 ರೂ, ಸಣ್ಣಗಾತ್ರದ ತೆಂಗಿನಕಾಯಿ 20 ರಿಂದ 30ರವರೆಗೆ ಮಾರಾಟವಾಗುತ್ತಿದೆ…!
ಮಳೆಯ ಕೊರತೆ, ಬಿಸಿಲಿನ ತಾಪ, ಬರ, ಬಿತ್ತನೆ ಕಡಿಮೆಯಾಗಿರುವುದು, ಇಳುವರಿ ಕುಂಠಿತ, ಬೇಡಿಕೆ ಕುಸಿತ ಪರಿಣಾಮ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದೆ…!!