ಶ್ರೀ ಕಮಂಡಲ ಗಣಪತಿ ಕ್ಷೇತ್ರ : ದಕ್ಷಿಣದ ಅನೇಕ ದೇವಾಲಯಗಳು ಪುರಾಣಗಳೊಂದಿಗೆ ಸಂಬಂಧವಿರುವ ಹಾಗೂ ಪುರಾಣಗಳಲ್ಲಿಯೂ ಉಲ್ಲೇಖವಿರುವ ಮಹತ್ವದ ಸ್ಥಾನವನ್ನು ಹೊಂದಿದೆ ಹಾಗೂ ದಕ್ಷಿಣ ಭಾರತದ ದೇವಾಲಯದ ವಾಸ್ತುಶಿಲ್ಪಗಳು ತನ್ನದೇ ಆದಂತಹ ವೈಭವಗಳನ್ನು ಜಗತ್ತಿನ ಮುಂದೆ ತೆರೆದಿಡುತ್ತಿದೆ ಹೌದು ಸ್ನೇಹಿತರೆ ದಕ್ಷಿಣ ಭಾರತದ ಅನೇಕ ದೇವಾಲಯಗಳ ವಾಸ್ತುಶಿಲ್ಪಗಳು ಹಾಗೂ ದೇವಾಲಯದ ವಿಶೇಷವಾದಂತಹ ಮಹತ್ವಗಳು ಭಕ್ತಾದಿಗಳ ಮನಸ್ಸನ್ನು ಗೆದ್ದಿದೆ ಹಾಗೂ ಇವತ್ತಿಗೂ ಕೂಡ ಅನೇಕ ದೇವಾಲಯಗಳಲ್ಲಿ ಪವಾಡಗಳು ನಡೆಯುತ್ತಿದೆ ಇಂದಿನ ವಿಜ್ಞಾನ ಲೋಕಕ್ಕೂ ಸವಾಲಾಗಿ ನಿಂತಿರುವ ಅನೇಕ ದೇವಾಲಯಗಳು ಹಾಗೂ ತನ್ನಲ್ಲಿ ಅಘಾತವಾದಂತಹ ರಹಸ್ಯಗಳನ್ನು ಇಟ್ಟುಕೊಂಡಿದೆ.
ಎಷ್ಟು ದೇವಾಲಯಗಳ ರಹಸ್ಯಗಳನ್ನು ಬಯಲು ಮಾಡಲು ವಿಜ್ಞಾನಿಗಳು ಹರಸಾಹಸವನ್ನು ಪಟ್ಟರು ಕೂಡ ಇಂದಿಗೂ ಕೂಡ ಅದನ್ನು ಬಹಿರಂಗ ಮಾಡಲು ಸಾಧ್ಯವಾಗಲಿಲ್ಲ.
ಅದೇ ರೀತಿ ಹಿಂದೂ ಪುರಾಣಗಳ ಪ್ರಕಾರ ದೇವಾಲಯಗಳು ಅಂದರೆ ಅಲ್ಲಿ ಸಾಕ್ಷಾತ್ ದೇವರೇ ನೆಲೆಸಿರುತ್ತಾರೆ ಹಾಗೂ ಮಾನವನ ಮನದ ಕಷ್ಟಗಳನ್ನು ಹಾಗೂ ನೋವುಗಳನ್ನು ಆ ದೇವರ ಸಾನಿಧ್ಯದಲ್ಲಿ ಹೇಳಿಕೊಂಡರೆ ಅಥವಾ ಹಂಚಿಕೊಂಡರೆ ಅದಕ್ಕೆ ಪರಿಹಾರ ಸಿಗುತ್ತದೆ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವ ಮನಸ್ಸಿನ ಎಲ್ಲಾ ಕಷ್ಟ ದುಃಖಗಳನ್ನು ಪರಿಹಾರ ಮಾಡುವ ಒಂದೇ ಒಂದು ಸ್ಥಳವೆಂದರೆ ಅದು ದೇವಾಲಯ,
ಈ ಲೇಖನದಲ್ಲಿ ಅದೇ ತರದ ವಿಶೇಷವಾದಂತಹ ಹಾಗೂ ನಮ್ಮ ಕರ್ನಾಟಕದಲ್ಲಿಯೇ ಇರುವ ಪುರಾಣ ಕಥೆಗಳೊಂದಿಗೆ ಸಂಬಂಧವಿರುವಂತಹ ಒಂದು ಪುಣ್ಯಕ್ಷೇತ್ರದ ಮಹತ್ವವನ್ನು ನೋಡೋಣ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಶ್ರೀ ಕಮಂಡಲ ಗಣಪತಿ ಕ್ಷೇತ್ರ ಈ ದೇವಾಲಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ ಈ ದೇವಾಲಯವನ್ನು ಬ್ರಾಹ್ಮಿ ನದಿಯ ಉಗಮ ಸ್ಥಾನ ಎಂದು ಕರೆಯುತ್ತಾರೆ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪದ ಸುಂದರ ಮನೋಹರ ವಾದಂತಹ ಪ್ರಕೃತಿಯ ನಡುವೆ ಸುಮಾರು ಸಾವಿರ ವರ್ಷಗಳಿಗಿಂತಲೂ ಅಧಿಕ ಇತಿಹಾಸ ಇರುವ ಹಾಗೂ ಪುರಾಣಗಳೊಂದಿಗೂ ಸಂಬಂಧವಿರುವ ಒಂದು ಪುಣ್ಯಕ್ಷೇತ್ರವಿದು.
ಈ ಕ್ಷೇತ್ರದಲ್ಲಿ ವಿಘ್ನ ವಿನಾಶಕನಾದ ಶ್ರೀ ಮಹಾಗಣಪತಿಯ ಎದುರಿಗೆ ಇರುವ ಕಮಲಕುಂಡದಲ್ಲಿ ವರ್ಷದ ಪ್ರತಿದಿನವೂ ನೀರು ಹರಿಯುತ್ತಿರುತ್ತದೆ ಇತಿಹಾಸದಲ್ಲಿ ಎಂದೂ ಕೂಡ ಈ ನೀರಿನ ಕೊಂಡ ಬತ್ತಿದ ಉದಾಹರಣೆಗಳೇ ಇಲ್ಲ.
ಶ್ರೀ ಕಮಂಡಲ ಗಣಪತಿ ದೇವಾಲಯದ ಸ್ಥಳ ಪುರಾಣ.
ಪುರಾಣಗಳಲ್ಲಿ ಉಲ್ಲೇಖವಿರುವಂತೆ ಪಾರ್ವತಿ ದೇವಿಗೆ ಶನಿದೋಷ ಕಾಡುತ್ತದೆ ನಂತರ ಈ ಶನಿದೋಷದಿಂದ ಮುಕ್ತಿ ಪಡೆಯುವುದು ಹೇಗೆ ಎಂದು ತೋಚೋದಿಲ್ಲ ಆಗ ದೇವಗುರು ಬ್ರಾಸ್ಪತಿ ಆಚಾರ್ಯರು ದೇವಿಗೆ ಸಲಹೆಯನ್ನು ನೀಡುತ್ತಾರೆ ನೀವು ಭೂಲೋಕಕ್ಕೆ ತೆರಳಿ ಅಲ್ಲಿ ತಪಸ್ಸನ್ನು ಮಾಡಿದರೆ ಹಾಗೂ ತಪಸ್ಸನ್ನು ಮಾಡಿ ವಿಘ್ನೇಶ್ವರನನ್ನು ಪೂಜಿಸಿದರೆ ನಿಮ್ಮ ಈ ಶನಿದೋಷ ದೂರವಾಗುತ್ತದೆ ಹಾಗೂ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ.
ದೇವಿ ಪಾರ್ವತಿ ತಪಸ್ಸನ್ನ ಆಚರಿಸಲು ಈ ಕ್ಷೇತ್ರದ ಸ್ವಲ್ಪ ದೂರದಲ್ಲಿ ಇರುವ ಮೃಗವದೆ ಎಂಬ ಸ್ಥಳದಲ್ಲಿ ತಪಸ್ಸನ್ನು ಮಾಡುತ್ತಿರುತ್ತಾಳೆ. ದೇವಿ ತಪಸ್ಸನ್ನು ಪೂರ್ಣ ಮಾಡಿದ ನಂತರ ಗಣಪತಿಯ ಪೂಜೆ ಮಾಡಲು ಇಚ್ಚಿಸುತ್ತಾಳೆ ಆದರೆ ಸುತ್ತಮುತ್ತಲಿನ ವಾತಾವರಣದಲ್ಲಿ ಎಲ್ಲಿ ಹುಡುಕಿದರು ಪಾರ್ವತಿ ದೇವಿಗೆ ನೀರು ಸಿಗೋದಿಲ್ಲ ಆಗ ಪಾರ್ವತಿ ದೇವಿಯು ಬ್ರಹ್ಮನನ್ನು ಪ್ರಾರ್ಥಿಸುತ್ತಾಳೆ ಬ್ರಹ್ಮನು ಪ್ರತ್ಯಕ್ಷನಾಗಿ ನೆಲಕ್ಕೆ ಬಾಣವನ್ನು ಬಿಡುತ್ತಾನೆ. ಬ್ರಹ್ಮ ಬಾಣಬಿಟ್ಟ ತಕ್ಷಣ ಆ ಸ್ಥಳದಲ್ಲಿ ನೀರು ಚಿಮ್ಮಲು ಶುರುವಾಗುತ್ತದೆ ನಂತರ ಪಾರ್ವತಿ ದೇವಿಯು ಅಲ್ಲಿಯೇ ಗಣಪತಿಯನ್ನು ಪ್ರತಿಷ್ಠಾಪಿಸಿ ಅದೇ ನೀರಿನಿಂದ ಅಭಿಷೇಕವನ್ನು ಮಾಡಿ ಗಣಪತಿಯ ಪೂಜೆಯನ್ನು ನೆರವೇರಿಸುತ್ತಾಳೆ ಹಾಗೆ ಪಾರ್ವತಿ ದೇವಿಯ ಸನ್ನಿದೋಷವೂ ಕೂಡ ಪರಿಹಾರವಾಗುತ್ತದೆ ಅಂದಿನಿಂದ ಇಂದಿನವರೆಗೂ ಈ ಬ್ರಹ್ಮಬಾಣಬಿಟ್ಟ ಕುಂಡದಿಂದ ಎಂದು ನೀರು ನಿಂತಿಲ್ಲ .
ಬ್ರಹ್ಮ ಕಮಲದ ಆಕಾರದ ಬಾಣವನ್ನು ಬಿಟ್ಟಿದ್ದರಿಂದ ಇದು ಕಮಲದ ಆಕಾರದ ಕುಂಡದ ರೀತಿ ರಚನೆಯಾಗುತ್ತದೆ ಹಾಗಾಗಿ ಇದಕ್ಕೆ ಕಮಂಡಲ ಕೊಂಡ ಹಾಗೂ ಇಲ್ಲಿ ಗಣಪತಿ ಇರುವುದರಿಂದ ಕಮಂಡಲ ಗಣಪತಿ ಕ್ಷೇತ್ರವೆಂದು ಕರೆಯುತ್ತಾರೆ.
ವಿಶೇಷ ಏನೆಂದರೆ ಎಷ್ಟೇ ಬೇಸಿಗೆ ಬಂದರೂ ಈ ಕ್ಷೇತ್ರದ ಕಮಂಡಲ ಕೊಂಡದಿಂದ ಎಂದೂ ಕೂಡ ನೀರು ಬತ್ತಿದ ಉದಾಹರಣೆ ಇಲ್ಲ ಹಾಗೆ ಈ ಕುಂಡದಿಂದ ಉಕ್ಕಿ ಹರಿಯುವ ನೀರೇ ಬ್ರಾಹ್ಮೀ ನದಿಯ ಉಗಮ ಸ್ಥಾನ ಎಲ್ಲಿಂದ ಹರಿದ ನೀರೇ ನಂತರ ಬ್ರಾಹ್ಮಿ ನದಿ ಆಗಿ ಹರಿಯುತ್ತದೆ ಬ್ರಹ್ಮನ ಬಾಣದಿಂದ ಸೃಷ್ಟಿಯಾದ ಕಾರಣ ಈ ನದಿಗೆ ಬ್ರಾಹ್ಮೀ ಎಂದು ಹೆಸರು ಬಂದಿದೆ .
ಕೆಲವು ವರ್ಷಗಳ ಹಿಂದೆ ದೇವಾಲಯದಲ್ಲಿ ಅಗ್ನಿ ಅವಘಟ ಸಂಭವಿಸಿ ಗಣಪತಿಯ ವಿಗ್ರಹಕ್ಕೆ ಹಾನಿಯಾಗುತ್ತದೆ ಅದಾದ ನಂತರ ಊರಿನ ಜನರು ಹಾಗೂ ಅಲ್ಲಿನ ಎಲ್ಲಾ ಹಿರಿಯರು ಹೊಸದೊಂದು ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪನೆ ಮಾಡಲು ಮುಂದಾಗುತ್ತಾರೆ ಆಗ ಶ್ರೀ ಶಾಮರಾಯ ಆಚಾರ್ಯರು ಹಳೆಯ ಮೂರ್ತಿಯ ರೂಪವೇ ಹೋಲುವಂತೆ ಹಾಗೂ ಹಳೆಯ ಮೂರ್ತಿ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳುತ್ತಾರೆ ಹಾಗೆ ಅದೇ ಮೂರ್ತಿಯ ರೂಪದಲ್ಲಿ ಮೂರ್ತಿಯನ್ನು ಕೆತ್ತನೆ ಮಾಡಿ ನಂತರ ಎಲ್ಲರೂ ಸೇರಿ ಅಲ್ಲಿ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ.
ಈ ದೇವಾಲಯಕ್ಕೆ ಹಾಗೂ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಅಂದಿನ ಬ್ರಿಟಿಷ್ ಸರಕಾರವು ಕೂಡ 1926 ರಲ್ಲಿ ಬ್ರಿಟಿಷರ ಕಾರ ಒಂದು ರೂಪಾಯಿ 56 ಪೈಸೆಯನ್ನು ಈ ದೇವಾಲಯದ ಜೀರ್ಣೋದ್ಧಾರಕ್ಕಾಗಿ ದೇಣೆಗೆ ನೀಡಿದೆ ಎಂದು ಹೇಳಲಾಗುತ್ತದೆ.
ದೇವಾಲಯದ ಮಹತ್ವ
ಸ್ನೇಹಿತರೆ ಈ ದೇವಾಲಯದಲ್ಲಿ ಭಕ್ತರು ಅನೇಕ ರೀತಿಯ ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಹಾಗೂ ಬಂದ ಕಷ್ಟಗಳ ಪರಿಹಾರಕ್ಕಾಗಿ ವಿಘ್ನ ವಿನಾಶಕ ವಿಘ್ನೇಶ್ವರನನ್ನು ಪ್ರಾರ್ಥಿಸಿಕೊಂಡು ಈ ಕ್ಷೇತ್ರಕ್ಕೆ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ ಯೋಗ ಮುದ್ರೆಯ ರೂಪದಲ್ಲಿ ಈ ಕ್ಷೇತ್ರದಲ್ಲಿ ಗಣಪತಿ ಕುಳಿತುಕೊಂಡಿದ್ದಾನೆ ಈ ಮೂರ್ತಿಯ ವಿಶೇಷವೇನೆಂದರೆ ಈ ರೀತಿಯ ಮೂರ್ತಿ ಬೇರೆ ಯಾವ ದೇವಾಲಯದಲ್ಲೂ ಕೂಡ ಕಾಣಲು ಸಿಗುವುದಿಲ್ಲ ಅಂತ ಅಪರೂಪದ ಹಾಗೂ ವಿಶೇಷವಾದಂತಹ ಕ್ಷೇತ್ರ ಶ್ರೀ ಕಮಂಡಲ ಗಣಪತಿ ಕ್ಷೇತ್ರ.
ಹಾಗೆ ಈ ಕ್ಷೇತ್ರದಲ್ಲಿರುವ ತೀರ್ಥಕ್ಕೆ ಇನ್ನೊಂದು ಹೆಸರು ಕೂಡ ಇದೆ ಅದೇ ಕಮಂಡಲ ತೀರ್ಥ ಎಂದು .
ಶನಿ ದೋಷ ಪರಿಹಾರ
ಸ್ನೇಹಿತರೆ ಈ ಲೋಕದಲ್ಲಿ ಸೃಷ್ಟಿಯಾದ ಪ್ರತಿಯೊಬ್ಬರೂ ಕೂಡ ಶನಿಯ ದೃಷ್ಟಿ ಬೀಳುತ್ತದೆ ಅದೇ ರೀತಿ ಶನಿದೋಷದಿಂದ ಅನೇಕ ರೀತಿಯ ಕಷ್ಟಗಳು ಹಾಗೂ ನೋವುಗಳು ಎಲ್ಲವನ್ನು ಕೂಡ ಮಾನವರು ಅನುಭವಿಸಬೇಕಾಗುತ್ತದೆ ಅರ್ಥದ ಪ್ರಕಾರ ಶನಿ ದೇವರು ಯಾವ ಮನುಷ್ಯನಿಗೆ ಕಾಡುತ್ತಾನೋ ಅವನನ್ನು ಹಾಗೆ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತಾನೆ ಅನ್ನುವಂಥದ್ದು ನಂಬಿಕೆ ಅಹಂಕಾರ ಸ್ವಾರ್ಥ ಇವೆಲ್ಲವನ್ನ ದೂರ ಮಾಡುತ್ತಾನೆ ಅನ್ನುವಂಥ ನಂಬಿಕೆ ಇದೆ ಆದರೂ ಕೂಡ ಶನಿದೋಷದಿಂದ ಉಂಟಾದ ಅನೇಕ ಕಾರಣಗಳು ಅನೇಕ ಸಮಸ್ಯೆಗಳು ಮಾನವನಿಗೆ ಅನುಭವಿಸಲು ಕಷ್ಟಕರವಾಗಿರುತ್ತದೆ ಆದರೆ ಶಾಸ್ತ್ರಗಳಲ್ಲಿಯೂ ಕೂಡ ಅದಕ್ಕೆ ಅನೇಕ ಪರಿಹಾರಗಳನ್ನು ಕೂಡ ಹೇಳಿದ್ದಾರೆ.
ಆದರೆ ಶ್ರೀ ಕಮಂಡಲ ಗಣಪತಿ ದೇವಾಲಯದ ಕಮಂಡಲ ತೀರ್ಥದಲ್ಲಿ ಸ್ನಾನ ಮಾಡಿದರೆ ಸನ್ನಿದೋಷವೂ ಪರಿಹಾರ ಆಗುತ್ತದೆ ಅನ್ನುವಂತಹ ನಂಬಿಕೆ ಇದೆ ಹಾಗೂ ಶನಿದೋಷದಿಂದ ಮುಂದೆ ಯಾವ ತೊಂದರೆಯೂ ಕೂಡ ಆಗುವುದಿಲ್ಲ ಸ್ನಾನ ಮಾಡಿದ ನಂತರ ಸಂಪೂರ್ಣವಾಗಿ ಪರಿಹಾರವಾಗುತ್ತದೆ ಹಾಗೂ ಶನಿ ದೇವರು ಜೀವನದಲ್ಲಿ ಮಂಗಳಕರಾಗಲಿ ಎಂದು ಆಶೀರ್ವದಿಸುತ್ತಾನೆ ಎನ್ನುವಂತಹ ನಂಬಿಕೆ.
ಈ ದೇವಾಲಯಕ್ಕೆ ತಲುಪುವುದು ಹೇಗೆ
ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಸವೆ ಗ್ರಾಮದಲ್ಲಿರುವ ಈ ದೇವಾಲಯ ಶೃಂಗೇರಿ ಹಾಗೂ ಹೊರನಾಡಿಗೆ ಹೋದ ಭಕ್ತರು ಇಲ್ಲಿಗೆ ಸುಲಭದಲ್ಲಿ ತಲುಪಬಹುದು.