
ಉತ್ತರ ಪ್ರದೇಶ – ತಾಜ್ಮಹಲ್ ನ ಸಮೀಪದಲ್ಲಿಯೇ ಇರುವ ಮಸೀದಿಯಲ್ಲಿ ಯುವತಿಯ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ…!
ಇಲ್ಲಿನ ನಾಗ್ಲಾ ಪೈಮಾ ಪ್ರದೇಶದಲ್ಲಿರುವ ಮಸೀದಿಯಲ್ಲಿ ಈ ಘಟನೆ ನಡೆದಿದ್ದು, ಇದು ಅತ್ಯಾಚಾರ ಹಾಗೂ ಕೊಲೆ ಎಂದು ಶಂಕಿಸಲಾಗಿದೆ…!!
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಂತಕನಿಗಾಗಿ ಬಲೆ ಬೀಸಿದ್ದಾರೆ…!
ತಾಜ್ ಮಹಲ್ ಸಮೀಪದಲ್ಲಿರುವ ಮಸೀದಿಯಲ್ಲಿ ಈ ಘಟನೆ ನಡೆದಿದ್ದು, ಅರೆ ನಗ್ನಾವಸ್ಥೆಯಲ್ಲಿ 22ವರ್ಷದ ಯುವತಿ ಮೃತದೇಹ ಪತ್ತೆಯಾಗಿದೆ…!!
ಮಧ್ಯಾಹ್ನ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬಂದ ಭಕ್ತರು ಮೃತದೇಹ ಬಿದ್ದಿರುವುದನ್ನು ಕಂಡಿದ್ದಾರೆ…!!
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆಗೆ ಕೈಗೆತ್ತಿಕೊಂಡಿದ್ದು, ಈ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ…!