
ಜಗತ್ತಿನಲ್ಲಿಯೇ ಅತೀ ದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಜನತಾ ಪಕ್ಷ 2014 ರಿಂದ ಕೇಂದ್ರದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿದೆಯಾದರೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕವನ್ನು ಹೊರತು ಪಡಿಸಿ ಉಳಿದ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಾಗಿಲ್ಲ, 2014 ರಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರೆ, 2019 ರಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಶೂನ್ಯ ಸಂಪಾದನೆ ಮಾಡಿತ್ತು, ಹಾಗೆಯೇ ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಒಂದೇ ಒಂದು ಸ್ಥಾನವನ್ನು ಕೂಡ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ, ತೆಲಂಗಾಣದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಲ್ಪ ಮಟ್ಟದಲ್ಲಿ ಸಾಧನೆಯನ್ನು ಮಾಡಿತ್ತು, ಒಟ್ಟು 17 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 2019ರಲ್ಲಿ 4 ಕ್ಷೇತ್ರಗಳನ್ನು ಗೆದ್ದಿತ್ತು, ಕರ್ನಾಟಕದಲ್ಲಿ ಬಿಜೆಪಿಯ ಸಾಧನೆ ಅದ್ಭುತವಾಗಿತ್ತು, ಕಾಂಗ್ರೆಸ್ ಜೆಡಿಎಸ್ ಮೈತ್ರಿಯ ಹೊರತಾಗಿಯೂ ಬಿಜೆಪಿ ಒಟ್ಟು 28 ಕ್ಷೇತ್ರಗಳ ಪೈಕಿ 25 + 1 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆಯನ್ನೇ ಸ್ರಷ್ಠಿ ಮಾಡಿತ್ತು, ಇದನ್ನು ದಕ್ಷಿಣದಲ್ಲಿ ಬಿಜೆಪಿ ಪಾಲಿಗೆ ಪಂಚಾಮೃತ ಎಂದು ಕರೆದರೆ ತಪ್ಪಾಗಲಾರದು…!
ಈ ಬಾರಿಯ ಲೋಕಸಭಾ ಚುನಾವಣೆಗೆ “ಅಬ್ ಕಿ ಬಾರ್ ಚಾರ್ ಸೌ ಪಾರ್ ತೀಸರಿ ಬಾರ್ ಮೋದಿ ಸರ್ಕಾರ್” ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಎದುರಿಸುತ್ತಿರುವ ಬಿಜೆಪಿ 400 ರ ಗುರಿಯನ್ನು ತಲುಪಲು ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅವಶ್ಯಕತೆ ಇದೆ, ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲದೆ ಚಾರ್ ಸೌ ಪಾರ್ ಮಾಡುವುದು ಕಷ್ಟಕರ ಎಂದು ಅರಿತಿರುವ ಬಿಜೆಪಿ, ದಕ್ಷಿಣದ ರಾಜ್ಯಗಳ ಮೇಲೆ ಅತೀ ಹೆಚ್ಚಿನ ಫೋಕಸ್ ಮಾಡಿದೆ, ಪ್ರಧಾನಿ ನರೇಂದ್ರ ಮೋದಿ, ಗ್ರಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ದಕ್ಷಿಣ ರಾಜ್ಯಗಳಲ್ಲಿ ಅದರಲ್ಲೂ ತಮಿಳುನಾಡಿನಲ್ಲಿ ಅತೀ ಹೆಚ್ಚಿನ ಪ್ರಚಾರ ನಡೆಸಿದ್ದಾರೆ…!!
ದಕ್ಷಿಣ ಭಾರತದ ರಾಜ್ಯಗಳಲ್ಲಿ ಚುನಾವಣಾ ಕಾವು ಯಾವರೀತಿ ಇದೆ, ವಿವಿಧ ಪಕ್ಷಗಳ ಬಲಾಬಲ ಯಾವರೀತಿ ಇದೆ ಎಂಬುದನ್ನು ಒಂದೊಂದಾಗಿ ತಿಳಿಯೋಣ…!
ತಮಿಳುನಾಡು
ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಲ್ಲಿ ಎಪ್ರಿಲ್ 20 ರಂದು ಒಂದೇ ಹಂತದಲ್ಲಿ ಎಲ್ಲಾ 39 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ಮುಕ್ತಾಯಗೊಂಡಿದೆ, ತಮಿಳುನಾಡಿನ ರಾಜಕೀಯ ಸ್ಥಿತಿಗತಿ ಗಮನಿಸಿದರೆ ಈ ರಾಜ್ಯದಲ್ಲಿ ದ್ರಾವಿಡ ಪಕ್ಷಗಳದ್ದೇ ಕಾರುಬಾರು, ಒಮ್ಮೆ AIADMK ಗೆದ್ದರೆ ಮತ್ತೊಮ್ಮೆ DMK ಗೆಲ್ಲುತ್ತಿದೆ, ಕಾಂಗ್ರೆಸ್ 1961 ರಲ್ಲಿ ಕೊನೆಯ ಬಾರಿಗೆ ಇಲ್ಲಿ ಗೆದ್ದಿತ್ತು, ಇನ್ನೂ ಬಿಜೆಪಿ ಪಾಲಿಗೆ ತಮಿಳುನಾಡು ಮರುಭೂಮಿ ಎಂದರೆ ತಪ್ಪಾಗಲಾರದು…!
ಪಕ್ಷಗಳ ಸ್ಥಿತಿಗತಿ
DMK
DMK ಅಗ್ರ ನೇತಾರ ಕರುಣಾನಿಧಿ ನಿಧನದ ಬಳಿಕ ಅವರ ಪುತ್ರ ಎಂ ಕೆ ಸ್ಟಾಲಿನ್ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ…!
2021 ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆದ್ದು ಪ್ರಸ್ತುತ ಡಿಎಂಕೆ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ…!!
ಡಿಎಂಕೆ ಪಕ್ಷದ ಸನಾತನ ವಿರೋಧಿ ನೀತಿ, ಹಾಗೂ ಆ ಪಕ್ಷದ ನಾಯಕರ ಹಿಂದೂ ವಿರೋಧಿ ಹೇಳಿಕೆಗಳು ಪಕ್ಷಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುಳುವಾಗಿರಬಹುದು ಎಂಬುದು ಲೆಕ್ಕಾಚಾರ…!
AIADMK
ತಮಿಳುನಾಡನ್ನು ಅತೀ ಹೆಚ್ಚಿನ ಅವಧಿಯ ಕಾಲ ಆಳಿದ್ದ ತಮಿಳರ ಪಾಲಿನ ಅಮ್ಮ ಎಂದು ಖ್ಯಾತಿ ಪಡೆದಿದ್ದ AIADMK ಪಕ್ಷದ ನಾಯಕಿ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದ ಬಳಿಕ ಪಕ್ಷದಲ್ಲಿ ನಾಯಕತ್ವದ ಕೊರತೆಯಿಂದ AIADMK ಪತನದತ್ತ ಸಾಗುತ್ತಿದೆ…!
AIADMK ಪಕ್ಷದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಡಪಾಡಿ ಪಳನಿ ಸ್ವಾಮಿ ಮತ್ತು ಓ ಪನ್ನೀರಸೆಲ್ವಂ ಬಣರಾಜಕೀಯದಿಂದಾಗಿ, ಹಾಗೂ ಓ ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಪರಿಣಾಮ, ಮತ್ತು ಬಹಳ ದೊಡ್ಡ ಸಂಖ್ಯೆಯಲ್ಲಿ ಎಐಎಡಿಎಂಕೆ ಮಾಜಿ ಸಂಸದರು ಶಾಸಕರು ಬಿಜೆಪಿಗೆ ವಲಸೆ ಹೋದ ಪರಿಣಾಮ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು AIADMK ಪಕ್ಷ ಹೋರಾಡುತ್ತಿದೆ…!!
CONGRESS
ತಮಿಳುನಾಡಿನಲ್ಲಿ ಕಾಂಗ್ರೆಸ್ ಗೆ ಹೇಳಿಕೊಳ್ಳುವಷ್ಟು ನೆಲೆ ಇಲ್ಲ, ಮಿತ್ರ ಪಕ್ಷ ಡಿಎಂಕೆ ಜೊತೆಗೆ ಮೈತ್ರಿಕೂಟದಲ್ಲಿ ಒಂದು ಭಾಗವಾಗಿದ್ದು ತನ್ನ ಅಸ್ತಿತ್ವಕ್ಕಾಗಿ ಸೆಣಸಾಟ ನಡೆಸುತ್ತಿದೆ…!
BJP
ತಮಿಳುನಾಡಿನಲ್ಲಿ ಈ ಬಾರಿ ಅತೀ ಹೆಚ್ಚು ಸೀಟುಗಳನ್ನು ಗೆಲ್ಲಬೇಕು ಎಂಬ ಉದ್ದೇಶದಿಂದ ಬಿಜೆಪಿ ಈ ರಾಜ್ಯವನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿತ್ತು…!
ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ನೇತ್ರತ್ವದಲ್ಲಿ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆ ಎದುರಿಸಿದೆ…!!
ಅಣ್ಣಾಮಲೈ ಹೋದಲೆಲ್ಲಾ ಜನಬೆಂಬಲ ನೋಡಿದರೆ, ಅಣ್ಣಾಮಲೈ ದೊಡ್ಡ ಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂಬುದು ಸುಳ್ಳಲ್ಲ…!
ಕನಿಷ್ಠ 15 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ…!!
ಇಲ್ಲಿತನಕ DMK Vs AIADMK ಎನ್ನುವ ತರಹ ಚುನಾವಣೆಗಳು ನಡೆಯುತ್ತಿದ್ಧವು, ಆದರೆ ಈ ಬಾರಿ DMK Vs BJP ಚುನಾವಣೆ ನಡೆದಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ…!
ಇದಕ್ಕೆ ಮೂಲಕರಣ ಎಐಎಡಿಎಂಕೆ ಪತನ ಮತ್ತು ಅದರಿಂದ ಬಿಜೆಪಿಗೆ ನೇರ ಲಾಭ, ಅಣ್ಣಾಮಲೈ ಅಂತಹ ಸಮರ್ಥ ನಾಯಕತ್ವ, ಡಿಎಂಕೆ ಪಕ್ಷದ ಹಿಂದೂ ವಿರೋಧಿ ನೀತಿ…!!
ಬಿಜೆಪಿಯ ಈ ಜಾದೂ ಸಫಲವಾಗುತ್ತಾ ಎಂಬುದು ಜೂನ್ 4 ರಂದು ಗೊತ್ತಾಗಲಿದೆ…!
ಕರ್ನಾಟಕ
ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಗಮನಿಸಿದರೆ ಬಿಜೆಪಿ ಪಾಲಿನ ಭದ್ರಕೋಟೆ…!
ಬಿಜೆಪಿ ಪಾಲಿನ ದಕ್ಷಿಣದ ಹೆಬ್ಬಾಗಿಲು…!!
2004 ರ ನಂತರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿದೆ…!
ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದು ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ…!
ಬಿಜೆಪಿಯ ಈ ಕನಸು ನನಸಾಗುತ್ತಾ ಎಂಬುದು ಫಲಿತಾಂಶದ ದಿನವೇ ಗೊತ್ತಾಗಬೇಕಿದೆ…!!
ಕೇರಳ
ದಕ್ಷಿಣ ಭಾರತದ ಇನ್ನೊಂದು ರಾಜ್ಯವಾದ ಕೇರಳ ಎಡರಂಗದ ಭದ್ರಕೋಟೆ…!
ಇಲ್ಲಿ CPIM ನೇತೃತ್ವದ LDF ಮತ್ತು ಕಾಂಗ್ರೆಸ್ ನೇತೃತ್ವದ UDF ಪಕ್ಷಗಳದ್ದೇ ಕಾರುಬಾರು…!!
ಬಿಜೆಪಿಗೆ ಈ ರಾಜ್ಯದಲ್ಲಿ ಕಮಲ ನೆಡಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ…!
ಏಪ್ರಿಲ್ 26 ರಂದು ಒಂದೇ ಹಂತದಲ್ಲಿ ಕೇರಳದ ಎಲ್ಲಾ 20 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ…!!
ಈ ಬಾರಿ ಬಿಜೆಪಿ ಇಲ್ಲಿ ಕೆಲ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ…!
ತಿರುವನಂತಪುರಂ, ಪಟ್ಟನಂತಿಟ್ಟ, ಕಾಸರಗೋಡು, ತ್ರಿಶೂರ್,ಅತ್ತಿಂಗಲ್ ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯನ್ನು ಬಿಜೆಪಿ ಇಟ್ಟುಕೊಂಡಿದೆ…!!
ತೆಲಂಗಾಣ
ತೆಲುಗು ಅಸ್ಮಿತೆ ರಾಜಕೀಯ ಪಕ್ಷಗಳ ಭದ್ರಕೋಟೆಯಾಗಿದ್ದ ಈ ತೆಲುಗರ ನಾಡಿನಲ್ಲಿ ಈಗ ರಾಷ್ಟ್ರೀಯ ಪಕ್ಷಗಳ ಪಾರುಪತ್ಯ…!
2014 ರಲ್ಲಿ ತೆಲಂಗಾಣ ರಾಜ್ಯ ರಚನೆಯಾದ ನಂತರ 10 ವರ್ಷಗಳ ಕಾಲ ಕೆ ಸಿ ಚಂದ್ರಶೇಖರ್ ರಾವ್ ನೇತೃತ್ವದ ಬಿ ಆರ್ ಎಸ್ ಆಡಳಿತ ನಡೆಸಿತ್ತು…!
ಕುಟುಂಬ ರಾಜಕಾರಣ, ಕೆಸಿಆರ್ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ, ತೆಲಂಗಾಣದಲ್ಲಿ ಬಿಜೆಪಿಯ ಮತಗಳಿಕೆ ಹೆಚ್ಚಳ ಈ ಎಲ್ಲಾ ಕಾರಣದಿಂದ ಬಿ ಆರ್ ಎಸ್ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತು ಮಕಾಡೆ ಮಲಗಿತ್ತು…!!
ಪ್ರಸ್ತುತ ಕಾಂಗ್ರೆಸ್ ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದು ರೇವಂತ್ ರೆಡ್ಡಿ ಸಿಎಂ ಆಗಿದ್ದಾರೆ…!
ಬಿಜೆಪಿ ಹೈದರಾಬಾದ್ ಸೇರಿದಂತೆ ಕನಿಷ್ಠ 10 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದು, ಅದಕ್ಕಾಗಿ ಘಟಾನುಘಟಿ ನಾಯಕರನ್ನೇ ಚುನಾವಣಾ ಕಣಕ್ಕೆ ಇಳಿಸಿದೆ…!!
ಆಂಧ್ರಪ್ರದೇಶ
25 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಆಂಧ್ರಪ್ರದೇಶದಲ್ಲಿ YSRCP ಮತ್ತು TDP ಈ ಎರಡು ಪಕ್ಷಗಳ ಹಗ್ಗಜಗ್ಗಾಟದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮಂಕಾಗಿವೆ…!
ಆಂಧ್ರಪ್ರದೇಶದಲ್ಲಿ ಪಕ್ಷದ ನೆಲೆಯನ್ನು ಸುಧಾರಿಸಬೇಕು ಎಂಬ ದ್ರಷ್ಟಿಯಿಂದ ಬಿಜೆಪಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಯೊಂದಿಗೆ ಮೈತ್ರಿ ಮಾಡಿಕೊಂಡರೆ, ಕಾಂಗ್ರೆಸ್ ಯಾರೊಟ್ಟಿಗೂ ಮೈತ್ರಿಯಾಗದೆ ತಟಸ್ಥವಾಗಿದೆ…!!
ಬಿಜೆಪಿಯ ದಕ್ಷಿಣ ದಂಡಯಾತ್ರೆ ಎಷ್ಟರ ಮಟ್ಟಿಗೆ ಯಶಸ್ಸು ಹೊಂದುತ್ತೆ ಎಂಬುವುದು ಜೂನ್ 4 ಫಲಿತಾಂಶದ ದಿನದಂದು ಗೊತ್ತಾಗಲಿದೆ…!