
ಉಡುಪಿ – ಉಡುಪಿ ಜಿಲ್ಲಾ ಹೆಸರಾಂತ ಜವಳಿ ಮಳಿಗೆ “ಗೀತಾಂಜಲಿ ಸಿಲ್ಕ್” ಮತ್ತು “ಶಾಂತಿ ಸಾಗರ್” ಹೋಟೆಲ್ ನ ಸಂಸ್ಥಾಪಕರಾದ ನೀರೆ ಬೈಲೂರು ಗೋವಿಂದ ನಾಯಕ್ ಇಂದು ( ಮೇ 19 ) ಬೆಳಿಗ್ಗಿನ ಜಾವ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು…!
ಅವರಿಗೆ 89 ವರ್ಷ ವಯಸ್ಸಾಗಿತ್ತು…!!
ಮ್ರತರು 5 ಜನ ಪುತ್ರರು ಓರ್ವ ಪುತ್ರಿ ಸಹಿತ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ…!
ಮ್ರತರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಕಾರ್ಕಳ ತಾಲೂಕಿನ ಬೈಲೂರಿನ ನೀರೆಯಲ್ಲಿನ ಅವರ ಸ್ವಗ್ರಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ…!!
ಸಂಸ್ಥಾಪಕರ ನಿಧನದ ಹಿನ್ನೆಲೆಯಲ್ಲಿ ಉಡುಪಿಯ ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ರೆಸ್ಟೋರೆಂಟ್, ನ್ಯೂ ಶಾಂತಿ ಸಾಗರ್ ರೆಸ್ಟೋರೆಂಟ್, ಮಣಿಪಾಲದ ಶ್ರಿಶಾಂತಿಸಾಗರ್ ರೆಸ್ಟೋರೆಂಟ್ ಗೆ ರಜೆ ನೀಡಲಾಗಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ…!