
ಉಡುಪಿ – ಸ್ನಾನ ಮಾಡಲು ಬಚ್ಚಲು ಮನೆ ಬಳಿಯಲ್ಲಿ ನಿಂತಿದ್ದ ವೇಳೆ ಸಿಡಿಲು ಬಂದು ಬಡಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಶಿರ್ವ ಎಂಬಲ್ಲಿನ ಮಾಣಿಬೆಟ್ಟು ಬಳಿ ಗುರುವಾರ ರಾತ್ರಿ ನಡೆದಿದೆ…!
ಶಿರ್ವ MSRS ಕಾಲೇಜಿನ ದ್ವಿತೀಯ ವರ್ಷದ ಬಿಸಿಎ ವಿದ್ಯಾರ್ಥಿ, ಶಿರ್ವ ಮಾಣಿಬೆಟ್ಟು ತೋಟದ ಮನೆ ನಿವಾಸಿ ರಮೇಶ್ ಪೂಜಾರಿ ಅವರ ಪುತ್ರ ರಕ್ಷಿತ್ ಪೂಜಾರಿ (20) ಮ್ರತ ದುರ್ದೈವಿ…!!
ಈತ ನಿನ್ನೆ ಸಂಜೆ ಸ್ನಾನ ಮಾಡಲು ಬಚ್ಚಲು ಮನೆ ಬಳಿ ನಿಂತಿದ್ದ ವೇಳೆ ಸಿಡಿಲು ಬಂದು ಬಡಿದಿದೆ…!
ನೆಲದ ಮೇಲೆ ಬಿದ್ದಿದ್ದ ಅವನನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 10 ಗಂಟೆಗೆ ಕೊನೆಯುಸಿರೆಳೆದಿದ್ದಾನೆ…!!