
ಭಾರತದ ಪೂರ್ವ ಭಾಗದಲ್ಲಿರುವ ರಾಜ್ಯವಾದ ಪಶ್ಚಿಮ ಬಂಗಾಳ ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ…!
ಯಾವುದೇ ಒಂದು ರಾಜಕೀಯ ಪಕ್ಷ ಈ ರಾಜ್ಯವನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ ಎಂದು ಹೇಳಬಹುದು, ಕಾರಣ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ, 48 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮಹಾರಾಷ್ಟ್ರದ ಬಳಿಕ ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ 3 ನೇ ಪ್ರಮುಖ ರಾಜ್ಯವಿದು…!!
ಈ ಬಾರಿ ಅಬ್ ಕಿ ಬಾರ್ ಚಾರ್ ಸೌ ಪಾರ್ ತೀಸರಿ ಬಾರ್ ಮೋದಿ ಸರ್ಕಾರ್ ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಎದುರಿಸುತ್ತಿರುವ ಬಿಜೆಪಿ, ದೇಶದಾದ್ಯಂತ 400 ಸ್ಥಾನಗಳನ್ನು ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದೆ…!
ಹೀಗಾಗಿ ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗ್ರಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸುವ ಮೂಲಕ ಕಳೆದ 10 ವರ್ಷಗಳ ಎನ್ ಡಿ ಎ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ…!!
ಪಶ್ಚಿಮ ಬಂಗಾಳದ ರಾಜಕೀಯ ವಿಶ್ಲೇಷಣೆ ಮಾಡುವುದಾದರೇ, 2019 ರ ಚುನಾವಣಾ ಫಲಿತಾಂಶವನ್ನು ಒಮ್ಮೆ ಗಮನಿಸಿ ನೋಡಿದಾಗ, ಬಿಜೆಪಿಯ ಪಾಲಿಗೆ 2019 ರ ಚುನಾವಣಾ ಫಲಿತಾಂಶ ಅತ್ಯುತ್ತಮವೇ ಆಗಿತ್ತು…!
ಒಟ್ಟು 42 ಲೋಕಸಭಾ ಕ್ಷೇತ್ರಗಳ ಪೈಕಿ 18 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು ಮತ್ತು ಶೇಕಡಾ 40ರಷ್ಟು ಮತ ಗಳಿಸಿತ್ತು…!!
ಆಡಳಿತಾರೂಢ ಟಿಎಂಸಿ 22 ಸ್ಥಾನಗಳನ್ನು ಗೆದ್ದು ಶೇಕಡಾ 43 ರಷ್ಟು ಮತ ಪ್ರಮಾಣ ಪಡೆದಿತ್ತು…!
ಆದರೆ ಒಂದು ಕಾಲದಲ್ಲಿ ಎಡರಂಗದ ಭದ್ರಕೋಟೆಯಾಗಿದ್ದ, ಪಶ್ಚಿಮ ಬಂಗಾಳದಲ್ಲಿ 2019ರಲ್ಲಿ ಒಬ್ಬನೇ ಒಬ್ಬ ಸಿಪಿಎಂ ಅಭ್ಯರ್ಥಿ ಗೆದ್ದಿರಲಿಲ್ಲ…!!
ಕಾಂಗ್ರೆಸ್ 2019ರಲ್ಲಿ ಕೇವಲ 2 ಸೀಟುಗಳನ್ನು ಗೆದ್ದಿತ್ತು…!
2014 ರ ಫಲಿತಾಂಶವನ್ನು ಗಮನಿಸುವುದಾದರೆ ಟಿಎಂಸಿ 34, ಕಾಂಗ್ರೆಸ್ 4 ಮತ್ತು ಬಿಜೆಪಿ 2 ಕ್ಷೇತ್ರಗಳಲ್ಲಿ ಗೆದ್ದಿತ್ತು…!!
2019 ರ ಫಲಿತಾಂಶವನ್ನು ಗಮನಿಸಿದರೆ ಟಿಎಂಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಭಾರೀ ಪ್ರಮಾಣದಲ್ಲಿ ಹಿನ್ನಡೆಯಾಗಿರುವುದಂತೂ ಸತ್ಯ…!
ಈ ಬಾರಿಯ ಚುನಾವಣೆಯಲ್ಲಿನ ಪ್ರಮುಖ ವಿಷಯಗಳು
1) ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ( CAA ಮತ್ತು NRC ) ಪಶ್ಚಿಮ ಬಂಗಾಳದಲ್ಲಿ ಜಾರಿ ಮಾಡಲು ಆಡಳಿತಾರೂಢ ಟಿಎಂಸಿ ವಿರೋಧ
2) ಸಂದೇಶ್ ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಖುದ್ದು ಪ್ರಧಾನಿಯಿಂದಲೇ ಈ ವಿಷಯ ಪ್ರಸ್ತಾಪ
3) ಅಕ್ರಮ ಬಾಂಗ್ಲಾ ವಲಸಿಗರಿಗೆ ಟಿಎಂಸಿ ಕುಮ್ಮಕ್ಕು ಎಂದು ಬಿಜೆಪಿ ವಾದ
4) ಟಿಎಂಸಿ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪಿಗಳು
5) ಹಿಂದೂ ಕಾರ್ಯಕರ್ತರ ಮೇಲೆ ನಿರಂತರವಾಗಿ ಮಾರಣಾಂತಿಕ ಧಾಳಿ
6) ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿದೆ ಎನ್ನುತ್ತಿರುವ ಟಿಎಂಸಿ
ಪಕ್ಷವಾರು ಬಲಾಬಲ
2011 ಕ್ಕಿಂತ ಮೊದಲು ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಈಗ 13 ವರ್ಷಗಳಿಂದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ್ದೇ ಕಾರುಬಾರು, ಇನ್ನೊಂದೆಡೆ 2019 ರಿಂದ ನಿಧಾನವಾಗಿ ಮೊಳಕೆ ಒಡೆಯುತ್ತಿರುವ ಕಮಲ…!
ಒಂದು ಕಾಲದ ಎಡರಂಗದ ಭದ್ರಕೋಟೆ ಬಂಗಾಳದಲ್ಲಿ ಈಗ ಟಿಎಂಸಿ vs ಬಿಜೆಪಿ ನಡುವೆ ಸ್ಪರ್ಧೆ, ಕಾಂಗ್ರೆಸ್ ಹಾಗೂ ಎಡರಂಗದ ಪಕ್ಷಗಳಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ…!!
1998 ರಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ನಿಂದ ಹೊರಬಂದು ತ್ರಣಮೂಲ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದ್ದು ಕಾಂಗ್ರೆಸ್ ಗೆ ಭಾರಿ ದೊಡ್ಡ ಪೆಟ್ಟು ಬಿತ್ತು…!
2014ರ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ಹಿಡಿತಕ್ಕೆ ಬಿಜೆಪಿ ಬಂದಾಗ ಚಿತ್ರಣ ಮತ್ತಷ್ಟು ಬದಲಾಯಿತು, ಬಿಜೆಪಿಯ ಬಲ ಹೆಚ್ಚಾಯಿತು…!!
ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿ ಟಿಎಂಸಿ ಇದ್ದರೂ ಸಹ ಪಶ್ಚಿಮ ಬಂಗಾಳದಲ್ಲಿ ಅದು ಪ್ರತ್ಯೇಕವಾಗಿ ಸ್ಪರ್ಧೆ ಮಾಡುತಿದ್ದು ಎಲ್ಲಾ 42 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಇದು ಬಿಜೆಪಿಗೆ ವರವಾಗುವ ಎಲ್ಲಾ ಸಾಧ್ಯತೆಗಳೂ ಇವೆ…!
2016 ಹಾಗೂ 2021 ರ ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭಾ ಚುನಾವಣೆ
2016 ಮತ್ತು 2021 ರ ವಿಧಾನಸಭಾ ಚುನಾವಣೆ ಕುರಿತು ವಿಶ್ಲೇಷಣೆ ಮಾಡುವುದಾದರೇ 2016ರಲ್ಲಿ 211 ಸ್ಥಾನಗಳನ್ನು ಗೆದ್ದಿದ್ದ ಟಿಎಂಸಿ ಶೇಕಡಾ 44.91 ಮಾತುಗಳಿಗೆ ಪಡೆದಿತ್ತು, ಕಾಂಗ್ರೆಸ್ 44 ಸ್ಥಾನಗಳನ್ನು ಗೆಲ್ಲುವ ಮೂಲಕ ಶೇಕಡಾ 12.25 ರಷ್ಟು ಮಾತುಗಳನ್ನು ಪಡೆದರೆ, ಸಿಪಿಐಎಂ 26 ಸ್ಥಾನಗಳನ್ನು ಗೆದ್ದು 19.75% ಮತಗಳನ್ನು ಪಡೆದಿತ್ತು, ಬಿಜೆಪಿ ಕೇವಲ 3 ಸ್ಥಾನಗಳನ್ನು ಗೆದ್ದು ಶೇಕಡಾ 10.16 ರಷ್ಟು ಮತಗಳನ್ನು ಪಡೆದಿತ್ತು…!
ಅದೇ 2021 ರ ವಿಧಾನಸಭಾ ಚುನಾವಣಾ ಫಲಿತಾಂಶದ ಕಡೆಗೆ ಒಮ್ಮೆ ಗಮನ ಹರಿಸಿ ನೋಡಿ ಬಿಜೆಪಿ ಇಲ್ಲಿ ದೊಡ್ಡ ಮ್ಯಾಜಿಕ್ ಮಾಡಿತ್ತು, 77 ಸ್ಥಾನಗಳನ್ನು ಗೆದ್ದ ಬಿಜೆಪಿ ಶೇಕಡಾ 38.15 ರಷ್ಟು ಮತಗಳನ್ನು ಪಡೆದಿತ್ತು, ಅಂದರೆ 2016 ರ ಚುನಾವಣೆಗೆ ಹೋಲಿಸಿದರೆ 74 ಸ್ಥಾನ ಹೆಚ್ಚು, 29.99% ಹೆಚ್ಚು ಮತಗಳಿಕೆ…!!
ಇನ್ನೂ ಟಿಎಂಸಿ ಸಾಧನೆ ಹೇಳುವುದಾದರೆ 2021 ರಲ್ಲಿ 215 ಸ್ಥಾನಗಳನ್ನು ಗೆಲ್ಲುವ ಮೂಲಕ ಶೇಕಡಾ 48.02 ರಷ್ಟು ಮತಗಳನ್ನು ಪಡೆದಿತ್ತು, ಅಂದರೆ 2016 ಕ್ಕೆ ಹೋಲಿಸಿದರೆ 2 ಸ್ಥಾನ ಹೆಚ್ಚು, 3.11% ಹೆಚ್ಚು ಮತಗಳಿಕೆ, ಸಿಪಿಐಎಂ 4.73% ಮಾತುಗಳಿಗೆ ಪಡೆದು ಶೂನ್ಯ ಸಂಪಾದನೆ ಮಾಡಿತ್ತು, ಕಾಂಗ್ರೆಸ್ ಸಹ 2.93% ಮತಗಳನ್ನು ಪಡೆದು ಹೀನಾಯವಾಗಿ ಮುಖಭಂಗ ಅನುಭವಿಸಿತ್ತು…!
ಮೇಲಿನ ವಿಷಯದಲ್ಲಿ ಸ್ಪಷ್ಟವಾಗುವುದು ಏನೆಂದರೆ, 2016 ಹಾಗೂ 2021 ರ ಫಲಿತಾಂಶವನ್ನು ಒಮ್ಮೆ ಸರಿಯಾಗಿ ಗಮನಿಸಿ ಇಲ್ಲಿ ಬಿಜೆಪಿ ಅದ್ಭುತವಾದ ಪ್ರದರ್ಶನವನ್ನು 2021ರಲ್ಲಿ ಮಾಡಿದೆಯಾದರೂ ಟಿಎಂಸಿ ಪಕ್ಷಕ್ಕೆ ಏನೂ ನಷ್ಟವಾಗಿಲ್ಲ ಟಿಎಂಸಿ ಮತಗಳಿಕೆ ಮತ್ತು ಸ್ಥಾನಗಳು ಎರಡನ್ನೂ ಹೆಚ್ಚಿಗೆ ಪಡೆದಿದೆ, ಆದರೆ ಇಲ್ಲಿ ಪೆಟ್ಟು ಬಿದ್ದಿರುವುದು ಕಾಂಗ್ರೆಸ್ ಹಾಗೂ ಎಡರಂಗಕ್ಕೆ, ನೇರವಾಗಿ ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಮತಗಳು ಬಿಜೆಪಿಗೆ ಬಂದಿವೆ ಎಂದು ಮೇಲ್ನೋಟಕ್ಕೆ ತಿಳಿದು ಬರುವ ಸಂಗತಿ…!!
ಆದರೆ 2021 ರ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಕಣಕ್ಕೆ ಇಳಿದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯ ಸುವೆಂದು ಅಧಿಕಾರಿ ವಿರುದ್ಧ ಸೋತಿದ್ದರು ಎಂಬುದು ಇಲ್ಲಿ ಗಮನಾರ್ಹವಾದ ಸಂಗತಿ…!
2019 ರ ಲೋಕಸಭಾ ಚುನಾವಣೆಯನ್ನು ಗಮನಿಸಿದರೆ ಇಲ್ಲಿ ನಷ್ಟವಾಗಿದ್ದು ಟಿಎಂಸಿ ಗೆ, 2014 ರಲ್ಲಿ 34 ಸೀಟುಗಳನ್ನು ಗೆದ್ದಿದ್ದ ಟಿಎಂಸಿ 2019 ರಲ್ಲಿ 22 ಸ್ಥಾನಗಳಿಗೆ ಬಂದು ಕುಸಿದಿತ್ತು…!!
2014 ರಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2019 ರಲ್ಲಿ 18 ಸ್ಥಾನಗಳನ್ನು ಗೆದ್ದು ಅದ್ಭುತ ಸಾಧನೆ ಮಾಡಿತ್ತು…!
ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದರೆ, ಎಡಪಕ್ಷಗಳು ಶೂನ್ಯ ಸಾಧನೆ ಮಾಡಿದ್ದವು…!!
ಜಾತಿ ಲೆಕ್ಕಾಚಾರ
ಪಶ್ಚಿಮ ಬಂಗಾಳ 2011 ರ ಜನಗಣತಿ ಪ್ರಕಾರ 9.12 ಕೋಟಿ ಜನಸಂಖ್ಯೆಯನ್ನು ಹೊಂದಿದೆ, ಆ ಪೈಕಿ ಮುಸ್ಲಿಂ ಸಮುದಾಯದ ಜನಸಂಖ್ಯೆ 2.40 ಕೋಟಿ…!
ಶೇಕಡಾವಾರು ಲೆಕ್ಕಾಚಾರದಲ್ಲಿ ಹಿಂದೂಗಳ ಪ್ರಮಾಣ 70.54% ಮುಸ್ಲಿಮರ ಪ್ರಮಾಣ 27.01%…!!
ಏಳು ಹಂತಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ
ಪಶ್ಚಿಮ ಬಂಗಾಳದಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ…!
ಮೊದಲ ಮೂರು ಹಂತಗಳು ಏಪ್ರಿಲ್ 19, 26 ಮತ್ತು ಮೇ 7 ರಂದು ಮುಕ್ತಾಯಗೊಂಡಿದ್ದು 4 ನೇ ಹಂತದ ಚುನಾವಣೆ ಇಂದು ನಡೆಯುತ್ತಿದೆ…!!
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 7 ಹಂತಗಳಲ್ಲಿ ಚುನಾವಣೆ ನಡೆಸುವುದಕ್ಕೂ ಪದೇ ಪದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ…!
ಇಷ್ಟು ದೀರ್ಘ ಕಾಲದ ಚುನಾವಣಾ ಪ್ರಕ್ರಿಯೆ ಬೇಕಿತ್ತೇ…? ಎಂದು ತಕರಾರು ತೆಗೆದಿದ್ದಾರೆ…!!
2024 ರ ಚುನಾವಣೆಯ ಫಲಿತಾಂಶ ಏನಾಗುತ್ತೆ…? ಟಾರ್ಗೆಟ್ 30 ಇಟ್ಟಿರುವ ಬಿಜೆಪಿ ಗುರಿ ಮುಟ್ಟುತ್ತಾ…? ಅಥವಾ ಬಿಜೆಪಿಯನ್ನು ಕಟ್ಟಿಹಾಕಲು ಮಮತಾ ಯಶಸ್ವಿ ಆಗ್ತಾರಾ…? ಎಂಬುದು ಜೂನ್ 4 ರಂದು ತಿಳಿಯಲಿದೆ…!