ಬೆಳಿಗ್ಗೆ ನಾವು ಯಾವ ಸಮಯದಲ್ಲಿ ಉಪಹಾರ ಸೇವಿಸುವುದರಿಂದ ನಮ್ಮ ಹೃದಯ ಆರೋಗ್ಯವಾಗಿ ಇರುತ್ತದೆ ಗೊತ್ತಾ ಈ ವಿಷಯದಲ್ಲಿ ಸಂಶೋಧನ ವರದಿಗಳು ಏನು ಹೇಳುತ್ತದೆ.?
ಈಗಿನ ಆಧುನಿಕ ಯುಗದಲ್ಲಿ ನಮಗೆ ಆಹಾರ ಸೇವನೆ ಹಾಗೂ ಕೆಲಸ ಇವೆರಡರ ಸಮಯವೇ ಮರೆತು ಹೋಗಿದೆ ದೇಶದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೆಲವು ಸಂಸ್ಥೆಗಳು ಸಂಶೋಧನೆಯನ್ನು ನಡೆಸಿ ಇಂತಹ ಸಮಸ್ಯೆಗಳಿಗೆ ಕಾರಣ ಏನು ಅನ್ನೋದು ಒಂದೊಂದಾಗಿ ವರದಿಗಳು ನೀಡುತ್ತಿದೆ,
ನಮ್ಮ ಪೂರ್ವಜರು ಆಹಾರ ಸೇವನೆ ಪದ್ಧತಿಗೆ ತುಂಬಾ ಮಹತ್ವದ ಸ್ಥಾನವನ್ನು ನೀಡಿದ್ದರು ಆಹಾರ ಸೇವನೆಯ ಸಮಯ ನಿದ್ರೆಯ ಸಮಯ ಹಾಗೂ ಕೆಲಸದ ಸಮಯ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದರು ಹಾಗಾಗಿ ಅವರು ಜೀವನದ ಕೊನೆಯವರೆಗೂ ಆರೋಗ್ಯವಾಗಿ ಇರುತ್ತಿದ್ದರು ಆದರೆ ಇವತ್ತಿನ ದಿನಗಳಲ್ಲಿ ನಾವು ಸಿಕ್ಕಸಿಕ್ಕ ಆಹಾರಗಳನ್ನು ಸೇವನೆ ಮಾಡುತ್ತೇವೆ ಅದರ ಜೊತೆಗೆ ಆಹಾರ ಸೇವನೆಗೆ ಸಮಯವೇ ಇಲ್ಲ ರಾತ್ರಿ ಮಧ್ಯಾಹ್ನ ಬೆಳಿಗ್ಗೆ ಯಾವ ಸಮಯವನ್ನು ಪಾಲನೆ ಮಾಡುತ್ತಿಲ್ಲ.
ಹೌದು ಸ್ನೇಹಿತರೆ, ನಮ್ಮ ಪೂರ್ವಜರು ಬೆಳಗಿನ ಸಮಯದಲ್ಲಿ ಆಹಾರಗಳನ್ನು ಸರಿಯಾಗಿ ಸೇವಿಸುತ್ತಿದ್ದರು ಹಾಗೂ ಅವರ ಆಹಾರ ಸೇವನೆಯ ಮಿತಿ ಹಾಗೂ ಆಹಾರ ಸೇವನೆ ರೀತಿ ತುಂಬಾ ಉತ್ತಮವಾಗಿತ್ತು ಹಾಗಾಗಿ ಅವರು ಯಾವುದೇ ಸಮಸ್ಯೆಗಳಿಲ್ಲದೆ ಆರಾಮವಾಗಿ ಇರುತ್ತಿದ್ದರು ಆದರೆ ಈಗಿನ ಕಾಲದಲ್ಲಿ ನಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ.
ನೀವು ಬೆಳಿಗ್ಗೆ ಸರಿಯಾದ ಸಮಯಕ್ಕೆ ಉಪಹಾರ ಸೇವಿಸದಿದ್ದರೆ, ಅದು ನಿಮ್ಮ ಹೃದಯದ ಆರೋಗ್ಯವನ್ನು ಹಾಳುಮಾಡುತ್ತದೆ. ಬೆಳಗಿನ ಉಪಾಹಾರ ಯಾವ ಸಮಯದಲ್ಲಿ ನಿಮ್ಮ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎದ್ದು ತಿಳಿಯೋಣ
ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಉಪಹಾರ ಸೇವಿಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ –
ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಾವು ತಿನ್ನುವ ಆಹಾರದಿಂದ ನಮ್ಮ ದೇಹವು ರೂಪುಗೊಳ್ಳುತ್ತದೆ. ಉದಾಹರಣೆಗೆ, ನಿಮ್ಮ ಹೃದಯದ ತಂತಿಗಳು ಬೆಳಗಿನ ಉಪಾಹಾರದೊಂದಿಗೆ ಸಂಪರ್ಕ ಹೊಂದಿವೆ.
ನೀವು ಬೆಳಿಗ್ಗೆ ಉಪಾಹಾರ ಸೇವಿಸುವ ಸಮಯವು ನಿಮ್ಮ ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ನೀವು ಬೆಳಿಗ್ಗೆ ಸರಿಯಾದ ಸಮಯಕ್ಕೆ ಉಪಹಾರ ಸೇವಿಸದಿದ್ದರೆ, ಅದು ನಿಮ್ಮ ಹೃದಯದ ಆರೋಗ್ಯವನ್ನು ಹಾಳುಮಾಡುತ್ತದೆ. ಇದನ್ನು ನಾವು ಹೇಳುತ್ತಿಲ್ಲ, ಆದರೆ ಸಂಶೋಧನೆಯೊಂದರಲ್ಲಿ ಇದು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲ, ತಿನ್ನುವ ಸಮಯವು ನಮ್ಮ ನಿದ್ರೆಯ ಚಕ್ರದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಬೆಳಿಗ್ಗೆ ಯಾವ ಸಮಯದಲ್ಲಿ ಉಪಹಾರ ಸೇವಿಸುವುದರಿಂದ ನಿಮ್ಮ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿಯೋಣ
ಉಪಹಾರದ ಬಗ್ಗೆ ಸಂಶೋಧನೆ ಏನು ಹೇಳುತ್ತದೆ?
ನೀವು ಬೆಳಿಗ್ಗೆ 8 ಗಂಟೆಗೆ ಉಪಹಾರ ಸೇವಿಸಿದರೆ, ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ ಎಂದು ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆ (NRAE) ಇತ್ತೀಚೆಗೆ ಒಂದು ಸಂಶೋಧನೆಯಲ್ಲಿ ಬಹಿರಂಗಪಡಿಸಿದೆ. ಅದೇ ಸಮಯದಲ್ಲಿ, ನೀವು 9 ಗಂಟೆಗೆ ಉಪಹಾರ ಸೇವಿಸಿದರೆ ಹೃದಯ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ತಜ್ಞರ ಪ್ರಕಾರ, ಪ್ರತಿ ಗಂಟೆಯ ವಿಳಂಬವು ಹೃದ್ರೋಗದ ಅಪಾಯವನ್ನು ಶೇಕಡಾ 6 ರಷ್ಟು ಹೆಚ್ಚಿಸುತ್ತದೆ. ಬೆಳಿಗ್ಗೆ ತಡವಾಗಿ ಉಪಾಹಾರ ಸೇವಿಸುವ ಅಥವಾ ರಾತ್ರಿ ತಡವಾಗಿ ಊಟ ಮಾಡುವವರಲ್ಲಿ ಹೃದ್ರೋಗದ ಅಪಾಯವು ಹಲವಾರು ಪಟ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆ ವರದಿ ಹೇಳುತ್ತಿದೆ.
ಬೆಳಗಿನ ಉಪಾಹಾರ ಮತ್ತು ರಾತ್ರಿ ಊಟದ ನಡುವೆ ಇಷ್ಟು ಸಮಯದ ಅಂತರವಿರಬೇಕು.?
ಬೆಳಗಿನ ಉಪಹಾರ ಮತ್ತು ರಾತ್ರಿ ಊಟದ ನಡುವೆ ಕನಿಷ್ಠ 13 ಗಂಟೆಗಳ ಅಂತರ ಇರಬೇಕು ಎಂದು ಈ ಅಧ್ಯಯನ ಹೇಳುತ್ತದೆ. ಊಟದ ನಡುವೆ ಅಂತಹ ಅಂತರವನ್ನು ಹೊಂದಿರುವುದು ಸೆರೆಬ್ರೊವಾಸ್ಕುಲರ್ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಸಂಶೋಧನೆಯ ಪ್ರಕಾರ, ನೀವು ರಾತ್ರಿಯ ಊಟವನ್ನು ಬೇಗ ಸೇವಿಸಿದರೆ ಬೆಳಗಿನ ಉಪಾಹಾರ ಮತ್ತು ರಾತ್ರಿಯ ಊಟದ ನಡುವೆ ಉತ್ತಮ ಅಂತರವಿರುತ್ತದೆ. ಅದೇನೆಂದರೆ, ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದರಿಂದ ಆರೋಗ್ಯವಾಗಿರುವುದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ ಎಂದು ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆ (NRAE) ಇತ್ತೀಚೆಗೆ ಒಂದು ಸಂಶೋಧನೆಯಲ್ಲಿ ಬಹಿರಂಗಪಡಿಸಿದೆ.
ಬೆಳಗಿನ ಸಮಯದಲ್ಲಿ ನಾವು ಆಹಾರ ಸೇವನೆಯ ಬಗ್ಗೆ ಮಾತ್ರ ಗಮನ ಕೊಡುವಂತದ್ದು ಅಲ್ಲ ನಮ್ಮ ನಿತ್ಯ ಬೆಳಿಗ್ಗೆ ರಾತ್ರಿ ಹಾಗೂ ಮಧ್ಯಾಹ್ನ ಈ ಮೂರು ಸಮಯದಲ್ಲಿಯೂ ಕೂಡ ಆರೋಗ್ಯದ ಬಗ್ಗೆ ಗಮನ ಕೊಡಬೇಕಾಗುತ್ತದೆ ರಾತ್ರಿಯ ಊಟದ ಸಮಯ ಎಷ್ಟರಿಂದ ಎಷ್ಟು ಗಂಟೆ ಒಳಗೆ ಊಟ ಮಾಡಬೇಕಾಗುತ್ತದೆ ಹಾಗೂ ಮಧ್ಯಾಹ್ನವೂ ಕೂಡ ಅಷ್ಟೇ ಯಾವ ಸಮಯದಲ್ಲಿ ಊಟವನ್ನು ಮಾಡಿದರೆ ಉತ್ತಮ ಅನ್ನುವಂತದ್ದು ಗಮನಿಸಬೇಕಾಗುತ್ತದೆ ನಾವು ನಮ್ಮ ಆಹಾರ ಸೇವನೆಯ ಸಮಯವನ್ನು ಸರಿಯಾಗಿ ಪಾಲಿಸಿದರೆ ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಹಾಗೂ ಆರೋಗ್ಯವಂತರಾಗಿ ಇರಬಹುದು.
ರಾತ್ರಿಯ ಊಟದ ಸಮಯ
ರಾತ್ರಿ ಹಾಗೂ ಬೆಳಗಿನ ನಡುವೆ 13 ಗಂಟೆಗಳ ಅಂತರ ಇರಬೇಕೆಂದು ಸಂಶೋಧನೆ ಹೇಳುತ್ತದೆ ಅದೇ ರೀತಿ ನಮ್ಮ ಪೂರ್ವಜರು ಊಟದ ಸಮಯ ಹೇಗಿತ್ತು ಎಂದರೆ ಬೆಳಿಗ್ಗೆ 8:00 ಒಳಗೆ ಆಹಾರವನ್ನು ಸೇವನೆ ಮಾಡುತ್ತಿದ್ದರು ನಂತರ ಮಧ್ಯಾಹ್ನದ ಸಮಯದಲ್ಲಿ ಸೂರ್ಯ ನೆತ್ತಿಗೆ ಬಂದಾಗ ಆಹಾರವನ್ನು ಸೇವಿಸುತ್ತಿದ್ದರು ಆದರೆ ಸಂಜೆಗೆ ಊಟ ಮಾತ್ರ 6:00 ಯಿಂದ ಏಳು ಗಂಟೆಯ ಒಳಗೆ ಮಾಡುತ್ತಿದ್ದರು ಇದು ನಮ್ಮ ಪೂರ್ವಜರು ಪಾಲಿಸುತ್ತಿದ್ದ ಸಮಯ ಆದರೆ ಈಗಿನ ನಮ್ಮ ಒತ್ತಡ ಜೀವನದಲ್ಲಿ ನಮಗೆ ಈ ಸಮಯವನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ ಆದರೆ ಆಹಾರ ಸೇವನೆಯ ಮಧ್ಯದ ಅಂತರವನ್ನು ನಾವು ನೋಡಿಕೊಳ್ಳಬಹುದು ರಾತ್ರಿಯ ಊಟದ ಸಮಯ ಸುಮಾರು 9 ಗಂಟೆಯ ಒಳಗೆ ನಾವು ಮಾಡಿದರೆ ಉತ್ತಮ ಹಾಗೆ ಮಧ್ಯಾಹ್ನದ ಊಟದ ಸಮಯವೂ ಕೂಡ ಅಷ್ಟೇ ಒಂದು ಗಂಟೆ ಒಳಗೆ ಮಾಡಿದರೆ ಇನ್ನೂ ಉತ್ತಮವೆಂದು ಹೇಳುತ್ತಾರೆ.
ಹಾಗೆ ಊಟ ಆಹಾರವನ್ನು ಸೇವಿಸಿದ ಮೇಲೆ ವಿಶ್ರಾಂತಿಯ ಅಗತ್ಯವೂ ಕೂಡ ಇರುತ್ತದೆ ಸರಿ ಇರಕ್ಕೆ ಊಟ ಆಹಾರವನ್ನು ಸೇವಿಸಿದ ನಂತರ ಎಷ್ಟು ಸಮಯ ವಿಶ್ರಾಂತಿ ಪಡೆಯಬೇಕು ಅನ್ನೋದನ್ನು ನೋಡೋಣ.
ರಾತ್ರಿ ಊಟ ಮುಗಿಸಿದ ಮೇಲೆ ಸುಮಾರು 8 ರಿಂದ 9 ಗಂಟೆಗಳ ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ ಇದು ನಮ್ಮ ಜೀರ್ಣಕ್ರಿಯೆ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ ಹಾಗೂ ದೈಹಿಕವಾಗಿ ಬೇಕಾದ ಶಕ್ತಿ ಚೈತನ್ಯವನ್ನು ಈ ವಿಶ್ರಾಂತಿ ನೀಡುತ್ತದೆ ಹಾಗೆ ಆಹಾರದ ಪೌಷ್ಟಿಕಾಂಶಗಳು ಶರೀರದ ಜೊತೆ ಹಾಗೂ ರಕ್ತದ ಜೊತೆ ಸೇರೋಹಾಗೆ ಮಾಡುತ್ತದೆ ಹಾಗಾಗಿ ರಾತ್ರಿಯ ಸಮಯದ ವಿಶ್ರಾಂತಿ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ ತುಂಬಾ ಮುಖ್ಯ ಎನಿಸಿಕೊಂಡಿದೆ.
ಬೆಳಗಿನ ಉಪಹಾರ ಬೆಳಗ್ಗಿನ ಉಪಹಾರ ಮಾಡಿದ ನಂತರ ಸುಮಾರು 30 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ ಹೀಗೆ ವಿಶ್ರಾಂತಿ ಪಡೆಯುವುದರಿಂದ ಜೀರ್ಣಕ್ರಿಯೆಗೆ ಒಂದು ರೀತಿಯ ಸಹಾಯ ಮಾಡಿದಂತೆ ಆಗುತ್ತದೆ ಇಲ್ಲದಿದ್ದರೆ ನಮ್ಮ ಹೃದಯದ ಮೇಲೆ ಅತಿ ಹೆಚ್ಚಾಗಿ ಒತ್ತಡ ಬೇಡುವ ಸಾಧ್ಯತೆಗಳು ಇರುತ್ತದೆ.
ಇನ್ನು ಮಧ್ಯಾಹ್ನದ ಊಟದ ನಂತರ ಸುಮಾರು ಅರ್ಧ ಗಂಟೆಗೂ ಅಧಿಕ ವಿಶ್ರಾಂತಿ ಪಡೆಯಬೇಕಾಗುತ್ತದೆ ಈ ವಿಶ್ರಾಂತಿ ದೇಹದ ಆಯಾಸಗಳು ಹಾಗೂ ದೇಹದ ಒತ್ತಡಗಳನ್ನು ನಿಯಂತ್ರಿಸುತ್ತದೆ ಹಾಗೆ ಜೀರ್ಣಕ್ರಿಯೆಯನ್ನು ಸುಲಭವಾಗಿ ಆಗುವ ಹಾಗೆ ಮಾಡುತ್ತದೆ ನಂತರ ದೇಹಕ್ಕೆ ಬೇಕಾದ ಪೋಷಕಾಂಶಗಳು ಸೇವಿಸಿದ ಆಹಾರಗಳಿಂದ ಸೇರಿಸಲು ಪ್ರಯತ್ನಿಸುತ್ತದೆ.