Ganesh chaturthi 2024 : ಗಣೇಶ ಚತುರ್ಥಿಯ ಮಹತ್ವ ಹಾಗೂ ಮೂರ್ತಿ ಸ್ಥಾಪನೆಯ ಸಮಯ

ಗಣೇಶ ಚತುರ್ಥಿ ದೇಶಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ ಅದರಲ್ಲಿಯೂ ಮಹಾರಾಷ್ಟ್ರ ಕರ್ನಾಟಕ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಬಹಳ ಜೋರಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಚತುರ್ಥಿಯಂದು ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬ ಪ್ರಾರಂಭವಾಗುತ್ತದೆ. ಗಣೇಶ ಚತುರ್ಥಿಯ ದಿನದಂದು, ಗಣೇಶನು ಭೂಮಿಗೆ ಇಳಿದು ತನ್ನ ಭಕ್ತರಿಗೆ ಮುಂದಿನ 10 ದಿನಗಳವರೆಗೆ ಸೇವೆ ಮತ್ತು ಭಕ್ತಿಯನ್ನು ಮಾಡಲು ಅವಕಾಶವನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಗಣೇಶ ಚತುರ್ಥಿಯ ದಿನದಂದು ಹೆಚ್ಚಿನ ಮನೆಗಳಲ್ಲಿ ಹಾಗೂ ದೇವಸ್ಥಾನ ಮತ್ತು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಧಿವತ್ತಾಗಿ ಪೂಜಿಸಲಾಗುತ್ತದೆ. ಅನಂತರ ಅನಂತ ಚತುರ್ದಶಿಯ ದಿನದಂದು ಈ ಮೂರ್ತಿಯನ್ನು ‘ಗಣಪತಿ ಬಪ್ಪಾ ಮೋರಿಯಾ’ ಎಂಬ ಕೀರ್ತನೆಗಳೊಂದಿಗೆ ಮುಳುಗಿಸಲಾಗುತ್ತದೆ.

ಈ ಲೇಖನದಲ್ಲಿ ಗಣೇಶ ಚತುರ್ಥಿಯ ಮಹತ್ವ ಹಾಗೂ ಗಣೇಶ ಮೂರ್ತಿ ಸ್ಥಾಪನೆಯ ಸಮಯ ಹಾಗೂ ಪೌರಾಣಿಕ ಕಥೆಗಳನ್ನು ನೋಡೋಣ.

ಪೌರಾಣಿಕ ಕಥೆ

ಗಣೇಶ್ ಚತುರ್ಥಿ ಭೂಲೋಕದಲ್ಲಿ ಮಾತ್ರವಲ್ಲದೆ ಸಪ್ತ ಲೋಕಗಳಲ್ಲಿಯೂ ದೇವಾನುದೇವತೆಗಳು ಆಚರಿಸುತ್ತಾರೆ ಹಾಗೆ ಭಗವಾನ್ ಗಣೇಶನ ಮೊದಲ ಪೂಜೆಯ ವರವನ್ನು ಪಡೆದ ದೇವನಾಗಿದ್ದಾನೆ. ಯಾವುದೇ ಶುಭ ಕಾರ್ಯಗಳನ್ನ ಪ್ರಾರಂಭ ಮಾಡುವ ಮೊದಲು ಗಣೇಶನಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಒಂದು ದಿನ ಪಾರ್ವತಿ ದೇವಿಯು ಸ್ನಾನ ಮಾಡಲು ತೆರಳಬೇಕೆಂದು ನಿರ್ಧರಿಸುತ್ತಾರೆ ಆದರೆ ಆ ಸಮಯದಲ್ಲಿ ಅಲ್ಲಿ ರಕ್ಷಣೆಗಾಗಿ ಕಾವಲುಗಾರರಾಗಿ ಯಾರು ಇರೋದಿಲ್ಲ ಇದನ್ನು ಗಮನಿಸಿದ ಪಾರ್ವತಿ ಮಾತೆ ಪವಿತ್ರವಾದ ಮಣ್ಣು ಹಾಗೂ ಗಂಧಗಳಿಂದ ಒಂದು ಬಾಲಕನನ್ನು ತಯಾರಿಸುತ್ತಾರೆ ನಂತರ ಅದಕ್ಕೆ ಪ್ರಾಣಸಕ್ತಿ ಹಾಗೂ ದೈವಿಕ ಚೈತನ್ಯವನ್ನು ಆದಿಶಕ್ತಿ ತುಂಬುತ್ತಾರೆ ಅದಾದ ನಂತರ ಆ ಬಾಲಕನಿಗೆ ತನ್ನ ದ್ವಾರಪಾಲಕನಾಗಿ ಕಾವಲುಗಾರನಾಗಿ ರಕ್ಷಣೆ ಮಾಡಬೇಕು ಎಂದು ಹೇಳುತ್ತಾರೆ.

ಪಾರ್ವತಿ ದೇವಿ ಬಾಲಕನಿಗೆ ಹೇಳಿ ನಂತರ ಸ್ನಾನಕ್ಕೆ ಹೋಗುತ್ತಾರೆ ಆದರೆ ಸ್ವಲ್ಪ ಸಮಯದ ನಂತರ ಶಿವನು ಅಲ್ಲಿಗೆ ಬರುತ್ತಾನೆ, ಶಿವನು ಬಂದಾಗ ಗಣೇಶನು ಶಿವನನ್ನು ಒಳಗೆ ಬಿಡಲು ನಿರಾಕರಿಸುತ್ತಾನೆ ಮಾತೇ ಸ್ನಾನಗ್ರಹದಲ್ಲಿ ಇದ್ದಾರೆ ಹಾಗಾಗಿ ಒಳಗೆ ಬಿಡಲು ಸಾಧ್ಯವಾಗುವುದಿಲ್ಲ ಎಂದು ಗಣೇಶನು ಹೇಳುತ್ತಾನೆ ನಂತರ ಶಿವನಿಗೆ ಕೋಪ ಬಂದು ಶಿವ ಅಲ್ಲಿಂದ ತೆರಳಿ ತನ್ನ ಗಣಗಳನ್ನು ಅಲ್ಲಿ ಕಳಿಸುತ್ತಾನೆ ಶಿವಗಣಗಳು ಬಂದು ಗಣೇಶನ ಜೊತೆ ಯುದ್ಧವನ್ನು ಮಾಡಿ ಸೋಲುತ್ತಾರೆ ನಂತರ ಸಾಕ್ಷಾತ್ ಪರಶಿವನೆ ಗಣೇಶನ ಎದುರಿಗೆ ಬಂದು ತನ್ನ ತ್ರಿಶೂಲದಿಂದ ಗಣೇಶನ ಸ್ಥಿರಚೇದನ ಶಿವನು ಮಾಡುತ್ತಾನೆ .

ಅಷ್ಟರಲ್ಲಿ ಪಾರ್ವತಿ ದೇವಿ ಅಲ್ಲಿಗೆ ಬರುತ್ತಾರೆ ಪಾರ್ವತಿ ದೇವಿ ಆಘಾತದಿಂದ ಶಿವನಲ್ಲಿ ಹೇಳುತ್ತಾರೆ ಸ್ವಾಮಿ ನೀವು ಏನು ಮಾಡಿದರೂ ಸರಿ ನನ್ನ ಮಗನನ್ನು ನನಗೆ ಬದುಕಿಸಿಕೊಡಿ ನನ್ನ ಮಗನನ್ನು ಹಿಂತುರುಗಿಸಿ ಎಂದು ಬೇಡಿಕೊಳ್ಳುತ್ತಾಳೆ ಪಾರ್ವತಿ ದೇವಿಯ ಕೋರಿಕೆಯನ್ನು ಕೇಳಿ ಶಿವನು ತನ್ನ ಗಣಗಳಿಗೆ ಉತ್ತರಾ ದಿಕ್ಕಿಗೆ ತಲೆ ಹಾಕಿ ಮಲಗಿದ ಯಾವುದೇ ಜೀವಿ ಆದರೂ ಸರಿ ಅದರ ತಲೆಯನ್ನು ತನ್ನಿ ಎಂದು ಆದೇಶವನ್ನು ಮಾಡುತ್ತಾನೆ ಆದರೆ ಶಿವಗಣಗಳು ಎಲ್ಲಾ ಲೋಕಗಳಲ್ಲಿ ಹುಡುಕಿ ನಂತರ ಉತ್ತರಾದಿಕ್ಕಿಗೆ ತಲೆ ಮಾಡಿ ಮಲಗಿದ ಒಂದು ಆನೆಯ ತಲೆಯನ್ನು ತಂದು ಶಿವನಲ್ಲಿ ಕೊಡುತ್ತಾರೆ ಶಿವನು ಕಾಲದ ಪ್ರಭು ಆಗಿರುವುದರಿಂದ ಗಣೇಶನಿಗೆ ಆನೆಯ ತಲೆಯನ್ನು ಜೋಡಿಸಿ ಮರು ಜೀವವನ್ನು ನೀಡುತ್ತಾನೆ.

ಅದಾದ ನಂತರ ಬ್ರಹ್ಮ ವಿಷ್ಣು ಮಹೇಶ್ವರರು ಹಾಗೂ ದೇವಾನುದೇವತೆಗಳು ಗಣೇಶನಿಗೆ ಆಶೀರ್ವದಿಸುತ್ತಾರೆ ಹಾಗೂ ವಿಶೇಷ ಶಕ್ತಿಗಳನ್ನ ನೀಡುತ್ತಾರೆ ಅಂದಿನಿಂದ ಇಂದಿನವರೆಗೂ ಗಣೇಶ್ ಚತುರ್ಥಿಯನ್ನು ಸಪ್ತಲೋಕಗಳಲ್ಲಿಯೂ ಆಚರಿಸಲಾಗುತ್ತದೆ.

ಈ ವರ್ಷ ಗಣೇಶ ಚತುರ್ಥಿಯ ಸಮಯ

ಈ ವರ್ಷ ಗಣೇಶ ಚತುರ್ಥಿಯ ಮುಹೂರ್ತ ಪ್ರಾರಂಭವಾಗುವುದು ಸೆಪ್ಟೆಂಬರ್ 6 ರಂದು ಮಧ್ಯಾಹ್ನ 03:01 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7 ರಂದು ಸಂಜೆ 05:37 ಕ್ಕೆ ಮುಕ್ತಾಯವಾಗುತ್ತದೆ . ಸೆ.7ರಂದು ಗಣೇಶ ಚತುರ್ಥಿ ಆಚರಿಸಲಾಗುವುದು. ಈ ದಿನ ಬೆಳಗ್ಗೆ 11:03 ರಿಂದ ಮಧ್ಯಾಹ್ನ 01:34 ರವರೆಗೆ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಸಮಯ. ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿಮಗೆ ಸುಮಾರು 2 ಗಂಟೆ 31 ನಿಮಿಷಗಳ ಸಮಯ ಸಿಗುತ್ತದೆ.

ಗಣೇಶ ಮೂರ್ತಿ ಸ್ಥಾಪನೆ ಮತ್ತು ಪೂಜೆಯ ವಿಧಾನ:

ಗಣೇಶ ಚತುರ್ಥಿಯ ದಿನದಂದು ಗಣಪತಿಯನ್ನು ಪ್ರಸನ್ನಗೊಳಿಸುವುದರಿಂದ, ಬಯಸಿದ ಫಲಿತಾಂಶಗಳನ್ನು ಪಡೆಯಬಹುದು. ಈ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ. ಇದರ ನಂತರ, ಮರದ ಸ್ಟೂಲ್ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹರಡಿ. ಅದರ ಮೇಲೆ ಮೊದಲು ಅಕ್ಷತೆಯನ್ನು ಇರಿಸಿ ಮತ್ತು ಶ್ರೀಗಂಧದಿಂದ ಸ್ವಸ್ತಿಕವನ್ನು ಮಾಡಿ. ಇದರ ನಂತರ ಗಣಪತಿ ಅನ್ನು ಸ್ಥಾಪಿಸಿ. ಗಣೇಶನನ್ನು ಪ್ರತಿಷ್ಠಾಪಿಸುವಾಗ, ‘ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಂಪ್ರಭ. ಯಾವ ಅಡೆತಡೆಯೂ ಇಲ್ಲದೆ ಭಗವಂತ ಎಲ್ಲವನ್ನು ಮಂಗಳಕರವಾಗಿ ನೆರವೇರಿಸುವಂತೆ ಮಂತ್ರವನ್ನು ಐದು ಬಾರಿ ಜಪಿಸಿ.

ಹಾಗೆ ಧಾರ್ಮಿಕ ವಿಧಿ ವಿಧಾನಗಳಂತೆ ಶಾಸ್ತ್ರ ಹಾಗೂ ಮಂತ್ರೋಪಚಾರಗಳಿಂದ ಗಣೇಶನ ಪ್ರಾಣಪದಷ್ಟಪನೆಯನ್ನು ಮಾಡಬೇಕು.

ಈಗ ಗಣೇಶನಿಗೆ ಗಂಗಾಜಲದಿಂದ ಸ್ನಾನ ಮಾಡಿಸಿ. ಅವರಿಗೆ ಬಟ್ಟೆ, ಪವಿತ್ರ ದಾರ, ಶ್ರೀಗಂಧ, ದೂರ್ವಾ, ಅಕ್ಷತೆ, ಧೂಪ, ದೀಪ, ಶಮಿ ಎಲೆಗಳು, ಹಳದಿ ಹೂವುಗಳು ಮತ್ತು ಹಣ್ಣುಗಳನ್ನು ಅರ್ಪಿಸಿ. ಗಣೇಶನಿಗೆ ಸಿಂಧೂರ, ದುರ್ವ ಮತ್ತು ತುಪ್ಪವನ್ನು ಅರ್ಪಿಸಿ. ಅವರಿಗೆ 21 ಮೋದಕಗಳನ್ನು ಅರ್ಪಿಸಿ. ಗಣೇಶನ ಆರತಿಯನ್ನು ಮಾಡಿ ಮತ್ತು ನಿಮ್ಮ ಇಷ್ಟಾರ್ಥಗಳಿಗಾಗಿ ಆಶೀರ್ವಾದ ಪಡೆಯಿರಿ. ಅದರ ನಂತರ, ಗಣಪತಿಗೆ ಲಡ್ಡುಗಳನ್ನು ಅರ್ಪಿಸಿ ಮತ್ತು ಅದನ್ನು ಪ್ರಸಾದವಾಗಿ ವಿತರಿಸಿ.

ಗಣಪತಿ ಪೂಜೆಯ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ
ಗಣೇಶನ ವಿಗ್ರಹವನ್ನು ಪೂರ್ವ ಅಥವಾ ಈಶಾನ್ಯ ಮೂಲೆಯಲ್ಲಿ ಇರಿಸಿ. ಗಣೇಶನ ವಿಗ್ರಹವನ್ನು ದಕ್ಷಿಣ ಮತ್ತು ನೈಋತ್ಯ ಮೂಲೆಯಲ್ಲಿ ಇಡಬೇಡಿ. ಗಣೇಶನ ವಿಗ್ರಹದ ಮೇಲೆ ತುಳಸಿ ಮತ್ತು ಶಂಖದೊಂದಿಗೆ ನೀರನ್ನು ಅರ್ಪಿಸಬೇಡಿ. ಪೂಜೆಯಲ್ಲಿ ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಚರ್ಮದ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಗಣೇಶ ಚತುರ್ಥಿಯ ದಿನ ಭೂಮಿಯ ಮೇಲೆ ಅಧಿಕವಾಗಿ ಗಣೇಶನ ಚೈತನ್ಯವಿರುತ್ತದೆ ಈ ದಿನ ಗಣೇಶ ಚತುರ್ಥಿ ವ್ರತವನ್ನು ಮಾಡುವುದರಿಂದ ಹಾಗೂ ಉಪವಾಸ ಮಾಡುವುದರಿಂದ ಜೀವನದ ಎಲ್ಲಾ ಕಷ್ಟಗಳು ದೂರವಾಗಿ ಎಲ್ಲಾ ಇಷ್ಟಾರ್ಥಗಳು ಈಡೇರಿಸುತ್ತದೆ ಎಂದು ಹೇಳಲಾಗಿದೆ.

ಗಣೇಶನ ವಿಘ್ನ ವಿನಾಶಕ ಹಾಗಾಗಿ ಅವನನ್ನು ವಿಘ್ನೇಶ್ವರ ಎಂದು ಕರೆಯುತ್ತಾರೆ ಗಣೇಶನನ್ನು ಆರಾಧನೆ ಮಾಡಿದರೆ ಜೀವನದಲ್ಲಿ ಯಾವ ವಿಜ್ಞೆಗಳು ಬರುವುದಿಲ್ಲ ಅಕಸ್ಮಾತಾಗಿ ಬಂದರೂ ಕೂಡ ಅದು ಸಂಕಟವನ್ನು ನೀಡುವುದಿಲ್ಲ.

Leave a Comment

Your email address will not be published. Required fields are marked *

Scroll to Top