PDO ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಇಂದೇ ಅರ್ಜಿ ಸಲ್ಲಿಸಿ .

PDO Recruitment 2024 : ಸರಕಾರಿ ಹುದ್ದೆಗಳಿಗಾಗಿ ಹುಡುಕುತ್ತಿರುವವರು ಹಾಗೂ ಸರಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದು ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಸರಕಾರ ಸಿಹಿ ಸುದ್ದಿ ನೀಡಿದೆ.

ಹೌದು ಸ್ನೇಹಿತರೆ ಹೆಚ್ಚಿನವರಿಗೆ ಸರಕಾರ ಕೆಲಸ ಮಾಡಬೇಕು ಎಂದು ಆಸಕ್ತಿ ಇರುತ್ತದೆ ಆದರೆ ಸರಕಾರಿ ಕೆಲಸ ಈಗಿನ ಕಾಲದಲ್ಲಿ ಗಿಟ್ಟಿಸಿಕೊಳ್ಳಬೇಕು ಅಂದರೆ ಅದು ಸುಲಭದಲ್ಲಿ ಸಾಧ್ಯವಿಲ್ಲ ಸಾಕಷ್ಟು ಅನುಭವಗಳು ಇರಬೇಕಾಗುತ್ತದೆ ಹಾಗೆ ಪರೀಕ್ಷೆಗಳು ಸಂದರ್ಶನಗಳು ಹಾಗೂ ಕೆಲವು ಆಯ್ಕೆ ಪ್ರಕ್ರಿಯೆಗಳು ಇರುತ್ತದೆ ಇದು ಎಲ್ಲವನ್ನ ಎದುರಿಸಿ ಸರಕಾರಿ ಹುದ್ದೆಗೆ ಆಯ್ಕೆ ಆಗೋದು ತುಂಬಾ ಕಠಿಣವಾಗಿರುತ್ತದೆ.

ಆದರೆ ಇದೀಗ ಸರಕಾರಿ ಹುದ್ದೆಗಳು ಸಾಲು ಸಾಲಾಗಿ ಬಿಡುಗಡೆಯಾಗುತ್ತಿದೆ ಸರಕಾರದ ವಿವಿಧ ಇಲಾಖೆಗಳಲ್ಲಿ ಭರ್ಜರಿ ಉದ್ಯೋಗದ ಅವಕಾಶಗಳನ್ನು ನೀಡಲಾಗುತ್ತಿದೆ ಮೊನ್ನೆಯಷ್ಟೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಮತ್ತೊಮ್ಮೆ ಅರ್ಜಿಯನ್ನು ಕರೆಯಲಾಗಿತ್ತು ಇದೀಗ 247 PDO ಹುದ್ದೆಗೆ ಅರ್ಜಿಯನ್ನು ಪುನರ್ ಆರಂಭಿಸಲಾಗಿದೆ ಆಸಕ್ತಿ ಇರುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಸಂಪೂರ್ಣ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

PDO ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತಿ ಅಭ್ಯರ್ಥಿಗಳು ಈ ಲೇಖನವನ್ನು ಪೂರ್ತಿಯಾಗಿ ಓದಿ ಹಾಗೂ ಹೇಳಿರುವ ಎಲ್ಲಾ ಮಾಹಿತಿಗಳನ್ನು ಸೂಕ್ಷ್ಮವಾಗಿ ಗಮನಿಸಿ.

ಸ್ನೇಹಿತರೆ ಕರ್ನಾಟಕ ಲೋಕಸೇವಾ ಆಯೋಗ KPSC ಆದಿ ಸೂಚನೆಯ ಪ್ರಕಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಆಯ್ಕೆಗೆ ನೇಮಕಾತಿ ಅದಿಸೂಚನೆ ಹೊರಡಿಸಿದೆ.

ಈ ಹುದ್ದೆಗೆ ಸಂಬಂಧಿಸಿದ ಅಧಿಸೂಚನೆ ಇಲಾಖೆ ಹೊರಡಿಸಿದೆ ಸಂಪೂರ್ಣ ವಿವರಗಳನ್ನು ಓದಿಕೊಂಡು ಹಾಗೂ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಲ್ಲಿಸಬಹುದಾಗಿದೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಬೇಕಾದ ದಾಖಲೆಗಳೇನು? ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ಏನು ಅನ್ನೋದನ್ನ ನೋಡೋಣ.

ಹುದ್ದೆಯ ವಿವರ

ಇಲಾಖೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ

ಹುದ್ದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಒಟ್ಟು ಕಾಲಿ ಇರುವ ಹುದ್ದೆ. 247

PDO ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ ಅರ್ಹತೆಗಳು

ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿ ಮಾಡಿರುವಂತೆ ಕೊನೆಯ ದಿನಾಂಕ 03/10/2024 ಮೀಸಲಾತಿಯ ಪ್ರಕಾರ ನೆಮೋದಿಸಿದಂತೆ ಕನಿಷ್ಠ ವಯಾಮಿತಿ ಹಾಗೂ ಗರಿಷ್ಠ ವಯೋಮಿತಿ ಮೀರಬಾರದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ 18 ವರ್ಷ ಆಗಿರಬೇಕು
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ 38 ವರ್ಷ ಮೀರಬಾರದು
ಪ್ರವರ್ಗ 2a, 2b, 3a, ಅಭ್ಯರ್ಥಿಗಳಿಗೆ ಗರಿಷ್ಠ 41 ವರ್ಷ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ 43 ವರ್ಷ ಮೀರಬಾರದು

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ :18/09/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03/10/2024

ಶಿಕ್ಷಣ ಅರ್ಹತೆ

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ನಾದಕೋತರ ಪದವಿಯನ್ನು ಪಡೆದಿರಬೇಕು ಅಥವಾ ಇನ್ನಿತರೆ ಪದವಿಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ.

ಸಾಮಾನ್ಯವಾಗಿ ಎಲ್ಲಾ ಅರ್ಜಿಗೆ ಶುಲ್ಕವಿರುವಂತೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಶುಲ್ಕ ವಿಧಿಸಲಾಗುತ್ತದೆ.

  • ಸಾಮಾನ್ಯ ವರ್ಗದ ಅಭ್ಯರ್ಥಿಗೆ : 600
  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: 300
  • ಮಾಜಿ ಸೈನಿಕರಿಗೆ : 50
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿರುವುದಿಲ್ಲ.

ಹುದ್ದೆ ಆಯ್ಕೆ ಪ್ರಕ್ರಿಯೆ

ಸಾಮಾನ್ಯವಾಗಿ ಎಲ್ಲಾ ಹುದ್ದೆಯ ರೀತಿಯಲ್ಲಿ ಈ ಹುದ್ದೆಗು ಕೂಡ ಪರೀಕ್ಷೆ ನಡೆಸಲಾಗುತ್ತದೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಕನ್ನಡ ಭಾಷೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಿಗಳನ್ನು ತೆಗೆಯಬೇಕಾಗುತ್ತದೆ, SSLC ಅಥವಾ ಪಿಯುಸಿಯಲ್ಲಿ ಅಭ್ಯರ್ಥಿ ಕನ್ನಡದಲ್ಲಿ ಅತಿ ಹೆಚ್ಚು ಅಂಕೆಗಳನ್ನು ಪಡೆದಿರಬೇಕು ಹಾಗೂ ಅಭ್ಯರ್ಥಿಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಅದಾದ ನಂತರ ಅಭ್ಯರ್ಥಿಗಳು ಇನ್ನೆರಡು ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ಮಾದರಿಯ ಪತ್ರಿಕೆಗಳಿಂದ ಮೇಲ್ಪಟ್ಟ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ.

ಪರೀಕ್ಷೆಯಲ್ಲಿ ಬರುವ ವಿಷಯಗಳು

ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ವಿದ್ಯಮಾನ ಪ್ರಸ್ತುತ ರಾಜಕೀಯ ವಿಚಾರಗಳು ಹಾಗೂ ರಾಜ್ಯ ಹಾಗೂ ರಾಷ್ಟ್ರೀಯ ಇತಿಹಾಸ ವಿಜ್ಞಾನ ಹಾಗೂ ಭೂಗೋಳ..

ಪೇಪರ್ ಎರಡರಂತೆ ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್ ಎರಡರಲ್ಲಿಯೂ ಕೂಡ ಮೌಲ್ಯಮಾಪನವನ್ನು ಮಾಡಲಾಗುತ್ತದೆ ಅದಾದ ನಂತರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಈ ಹಿಂದೆ ಕೆಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಾಂತ್ರಿಕವಾಗಿ ಕೆಲವೊಂದಿಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಆ ಸಂದರ್ಭದಲ್ಲಿ ಅರ್ಜಿ ಸಲ್ಲಿಸಲಾಗದ ಅಭ್ಯರ್ಥಿಗಳು ಈಗ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

  • KPSC ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ www.kpsc.kar.nic.in ಗೆ ಭೇಟಿ ನೀಡಿ.
  • ಇದಾದ ನಂತರ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
  • ಅದಾದ ನಂತರ ಅಲ್ಲಿ ಕೇಳಿದ ದಾಖಲೆಗಳು ನಿಮ್ಮ ಫೋಟೋ ಹಾಗೂ ಡಿಜಿಟಲ್ ಸಹಿ ಜನ್ಮ ದಿನಾಂಕ ಹಾಗೂ ಗುರುತಿನ ಚೀಟಿ ಹಾಗೂ ಶಿಕ್ಷಣ ಪ್ರಮಾಣ ಪತ್ರ ಕೇಳಲಾದ ಎಲ್ಲಾ ಮಾಹಿತಿಗಳನ್ನು ಅಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ.
  • ನಂತರ ಶುಲ್ಕವನ್ನು ಪಾವತಿಸಿ.
  • ಇದಾದ ನಂತರ ಅರ್ಜಿಯ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಪರಿಶೀಲಿಸಿ ನಂತರ ಅರ್ಜಿಯನ್ನು ಸಲ್ಲಿಸಿ.

ಸ್ನೇಹಿತರೆ ಕೇಳಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ನೀವು ಅರ್ಜಿಯನ್ನು ಭರ್ತಿ ಮಾಡಿ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅದಾದ ನಂತರ ಪರೀಕ್ಷೆ ಪ್ರವೇಶ ಪತ್ರ ಆನ್ಲೈನ್ ಮುಖಾಂತರ ನೀವು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಿಗದಿ ಮಾಡಿದ ಪರೀಕ್ಷಾ ಕೇಂದ್ರಕ್ಕೆ ನೀವು ಸರಿಯಾದ ದಿನಾಂಕ ಹಾಗೂ ಸರಿಯಾದ ಸಮಯದಂದು ಭೇಟಿ ನೀಡಿ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ.

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಈ ಆಯ್ಕೆ ಪ್ರಕ್ರಿಯೆ ಪರೀಕ್ಷೆಯನ್ನು ಇದುವರೆಗೆ ಸಮಯ ಹಾಗೂ ದಿನಾಂಕವನ್ನು ನಿಗದಿ ಮಾಡಲಿಲ್ಲ ಸಮಯ ಹಾಗೂ ದಿನಾಂಕ ನಿಗದಿ ಆದ ತಕ್ಷಣ ಅಧಿಕೃತ ವೆಬ್ಸೈಟ್ನಲ್ಲಿ ಪ್ರವೇಶ ಪತ್ರವನ್ನು ಅಪ್ಲೋಡ್ ಮಾಡಲಾಗುತ್ತದೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಅಲ್ಲಿಂದಲೇ ಪಡೆಯಬಹುದು.

ಕರ್ನಾಟಕ ಲೋಕಸೇವಾ ಆಯೋಗದ ಸಂಪರ್ಕ ಇವರ

ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗ ಸೌಧ ಬೆಂಗಳೂರು : 560001
ದೂರವಾಣಿ ಸಂಖ್ಯೆ: 080-22266481
ಇ-ಮೇಲ್ ವಿಳಾಸ: kpsc-ka@nic.in
ಅಧಿಕೃತ ಜಾಲತಾಣ : www.KPSC.kar.nic.in

ಅರ್ಜಿ ಸಲ್ಲಿಸುವಾಗ ಅಥವಾ ಯಾವುದೇ ಹೆಚ್ಚಿನ ಮಾಹಿತಿಗಳಿಗಾಗಿ ಆಯೋಗವನ್ನು ಸಂಪರ್ಕ ಮಾಡಬಹುದು.

ಇದಿಷ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಯ್ಕೆ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನಿರಂತರ ಸುದ್ದಿಗಳನ್ನು ಹಾಗೂ ಇದೇ ರೀತಿಯ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿತ್ಯ ಧ್ವನಿ ವೆಬ್ಸೈಟ್ ಗೆ ಭೇಟಿ ನೀಡಿ, ನಿತ್ಯ ಧ್ವನಿ ಸತ್ಯ ಹಾಗೂ ನೈಜ ಮಾಹಿತಿಗಳನ್ನು ನೀಡುತ್ತದೆ ಯಾವುದೇ ರೀತಿಯ ಸುಳ್ಳು ಅಥವಾ ಹೂವ ಪೋಹ ಮಾಹಿತಿಗಳನ್ನು ನೀಡುವುದಿಲ್ಲ.

Leave a Comment

Your email address will not be published. Required fields are marked *

Scroll to Top