ಸನಾತನ ಹಿಂದೂ ಧರ್ಮದ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ಈ ಬ್ರಹ್ಮಾಂಡದಲ್ಲಿ 14 ಲೋಕಗಳು ಹಾಗೂ ಸಪ್ತ ಮೇಘಗಳು ಸಪ್ತ ಚಿರಂಜೀವಿಗಳು ಹಾಗೂ ಸಪ್ತ ಋಷಿಗಳು ಈ ಬ್ರಹ್ಮಾಂಡದಲ್ಲಿ ಇದೆ ಎಂದು ಪುರಾಣಗಳಲ್ಲಿ ಸ್ಪಷ್ಟವಾದ ಉಲ್ಲೇಖಗಳು ಇದೆ ಅದಕ್ಕೆ ಸಾಕ್ಷಿ ರೂಪವಾಗಿ ನೂರಾರು ಸಾಕ್ಷಿ ಹಾಗೂ ಚರಿತ್ರೆಗಳು ಕೂಡ ಇವೆ.
ಹಾಗೆ ಪುರಾಣಗಳಲ್ಲಿ ಒಂದು ಮಾತು ಬರುತ್ತದೆ ಕ್ಷೀರಸಾಗರ ಎಂದು ಆ ಕ್ಷೀರಸಾಗರ ಎಲ್ಲಿದೆ ಅಲ್ಲಿ ಯಾರು ವಾಸ ಮಾಡುತ್ತಾರೆ ಎಂದು ಇದುವರೆಗೆ ಎಷ್ಟೋ ಜನರಿಗೆ ಗೊತ್ತಿಲ್ಲ ಹಾಗೆ ಸನಾತನ ಹಿಂದೂ ಧರ್ಮದ ಪುರಾಣಗಳು ವೇದಗಳು ಉಪನಿಷತ್ತುಗಳು ಎಷ್ಟೋ ರಹಸ್ಯಮಯ ವಿಚಾರಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ,
ಹೌದು ಸ್ನೇಹಿತರೆ ಈ ಬ್ರಹ್ಮಾಂಡದ ಸೃಷ್ಟಿ ಯಾರು ಮಾಡಿದ್ದಾರೆ ಈ ಬ್ರಹ್ಮಾಂಡ ಉದಯ ಯಾವಾಗ ಆಯಿತು ಹಾಗೂ ಗ್ರಹಗತಿಗಳ ಸ್ಥಿತಿ ಏನು? ಅವರ ಉಪಸ್ಥಿತಿ ಏನು? ಅಲ್ಲಿನ ಅಧಿಪತಿ ಯಾರು? ಲೋಕದ ನಿಯಮಗಳೇನು? ಸೃಷ್ಟಿ ಸ್ಥಿತಿಯಿಲ್ಲ ಕಾರಣಗಳೇನು ಅನ್ನುವಂತಹ ನೂರಾರು ಪ್ರಶ್ನೆಗಳಿದೆ, ಆದರೆ ಈ ಎಲ್ಲದಕ್ಕೂ ಉತ್ತರ ಹಿಂದೂ ಧರ್ಮದ ಪುರಾಣ ಗ್ರಂಥಗಳಲ್ಲಿ ನೀಡಲಾಗಿದೆ.
ಇಡೀ ಬ್ರಹ್ಮಾಂಡವನ್ನು ಭಗವಾನ್ ವಿಷ್ಣು ನಿಯಂತ್ರಿಸುತ್ತಾನೆ ಹಾಗೂ ಅವನೇ ಆದಿಪುರುಷ ಅವನೇ ಆದಿಮಯೇ ಅವನೇ ಈ ಲೋಕದ ಸಂಪೂರ್ಣ ಒಡೆಯ ಎಂದು ಹೇಳುತ್ತಾರೆ ಇದಕ್ಕೆ ಸಾಕ್ಷಿಯಾಗಿ ಭಗವಾನ್ ಶ್ರೀ ಕೃಷ್ಣ ಕುರುಕ್ಷೇತ್ರ ರಣರಂಗದಲ್ಲಿ ಅರ್ಜುನನಿಗೆ ಭಗವದ್ಗೀತೆ ಉಪದೇಶವನ್ನು ಮಾಡುವಾಗ ಈ ಸತ್ಯವನ್ನು ಹೇಳುತ್ತಾನೆ ಈ ಈ ಜಗತ್ತಿನ ಸಂಪೂರ್ಣ ನಿಯಂತ್ರಕನು ನಾನೇ ಈ ಜಗತ್ತಿನ ಒಡೆಯನು ನಾನೇ ನನ್ನಲ್ಲಿಯೇ ಎಲ್ಲವೂ ಇದೆ ನಾನೇ ಪರಮಾತ್ಮ ಎಂದು ಅದೇ ರೀತಿ ಪರಮಾತ್ಮ ವಿಷ್ಣು ದೇವಾದಿ ದೇವತೆಗಳಿಗೆ ಒಡೆಯ ಮಾತ್ರ ಅಲ್ಲ ಇಡೀ ಬ್ರಹ್ಮಾಂಡ ಇಡೀ ಸೃಷ್ಟಿಗೆ ಒಡೆಯ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.
ಈ ಲೇಖನದಲ್ಲಿ ನಾವು ಶ್ವೇತ ದ್ವೀಪದ ಬಗ್ಗೆ ನೋಡೋಣ ಶ್ವೇತ ದೀಪದಲ್ಲಿ ಯಾರು ವಾಸ ಮಾಡುತ್ತಾರೆ ಅಲ್ಲಿ ಯಾರು ಇದ್ದಾರೆ ಅನ್ನುವಂತಹ ವಿಚಾರಗಳನ್ನು ನೋಡೋಣ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಶ್ವೇತ ದ್ವೀಪ ಹೆಸರನ್ನು ಸಹಜವಾಗಿ ನೀವು ಕೇಳಿರಬಹುದು ಆದರೆ ಈ ವೇತ ದ್ವೀಪದಲ್ಲಿ ಯಾರು ವಾಸ ಮಾಡುತ್ತಾರೆ. ಇಲ್ಲಿನ ಅಧಿಪತಿ ಯಾರು ಅನ್ನುವಂತಹ ವಿಚಾರಗಳು ತಿಳಿದುಕೊಳ್ಳೋಣ ಸ್ನೇಹಿತರೆ.
ಶ್ವೇತದ್ವೀಪ ಇಲ್ಲಿ ಭಗವಾನ್ ವಿಷ್ಣು ವಾಶಮಾಡುತ್ತಾನೆ ರಾಮಾಯಣ ಮಹಾಭಾರತ ಭಾಗವತ ಹಾಗೂ ಬ್ರಹ್ಮ ಸಂಹಿತ ದಲ್ಲಿಯೂ ಶ್ವೇತ ದ್ವೀಪದ ಬಗ್ಗೆ ಉಲ್ಲೇಖವಿದೆ ಸಾಕ್ಷಾತ್ ಮಹಾವಿಷ್ಣು ಕ್ಷೀರಸಾಗರದಲ್ಲಿ ವಾಸಿಸುತ್ತಾನೆ ಎಂದು ಹೇಳಲಾಗಿದೆ.
ಪುರಾಣಗಳಲ್ಲಿಯೂ ರಹಸ್ಯಮಯವಾಗಿ ಯಾವ ತಪಶ್ಚಿಗೂ ಯಾವ ಜ್ಞಾನಿಗೂ ಕಂಡುಹಿಡಿಯಲು ಸಾಧ್ಯವಾಗದ ಒಂದು ಸ್ಥಳವೇ ಶ್ವೇತ ದ್ವೀಪ ಸ್ನೇಹಿತರೆ (ಶ್ವೇತಾ ಎಂದು ಹೇಳಿದರೆ ಬಿಳಿ ಬಣ್ಣ ಎಂದು ಅರ್ಥ ದ್ವೀಪ ಅಂತ ಹೇಳಿದರೆ ಒಂದು ಸ್ಥಳ ಉದಾಹರಣೆ ಸಮುದ್ರ ಮಧ್ಯ ಅಥವಾ ಒಂದು ಸಾಗರದ ಮಧ್ಯೆ ಇರುವಂತಹ ಒಂದು ಸ್ಥಳ ಅದಕ್ಕೆ ಹೊರ ಪ್ರಪಂಚದ ಸಂಪರ್ಕಗಳಿರುವುದಿಲ್ಲ ಅದು ತನ್ನದೇ ಆದಂತಹ ಒಂದು ಸತ್ಯ ರಹಸ್ಯಗಳನ್ನ ತನ್ನಲ್ಲಿ ಅಡಗಿಸಿಕೊಂಡಿರುತ್ತದೆ ಇಂತಹ ಸ್ಥಳಗಳಿಗೆ ದ್ವೀಪ ಎಂದು ಕರೆಯುತ್ತಾರೆ)
ಇಡೀ ಬ್ರಹ್ಮಾಂಡದ ಒಳಗೆ ಶ್ವೇತ ದೀಪ ಎಂದು ಕರೆಯಲ್ಪಡುವ ಅತಿಂದ್ರಿಯ ಸ್ಥಳ ಹಾಗೂ ಸಾಕ್ಷಾತ್ ಭಗವಾನ್ ವಿಷ್ಣು ವಾಹಿಸುವ ಕ್ಷೀರಸಾಗರದ ನಡುವೆ ಇರುವ ಸ್ಥಳವೇ ಈ ಶ್ವೇತ ದ್ವೀಪ ಹಾಗೆ ಭಗವಾನ್ ಮಹಾವಿಷ್ಣು ಇಲ್ಲಿಯೇ ಬ್ರಹ್ಮ ವಿದ್ಯೆಯನ್ನು ಪಡೆಯಲು ಕಠಿಣವಾದ ತಪಸ್ಸನ್ನು ಮಾಡಿದನು ಎಂದು ಹೇಳಲಾಗುತ್ತದೆ ಈ ಶ್ವೇತ ದ್ವೀಪವು ಮೇರು ಪರ್ವತದಿಂದ ಸುಮಾರು 32 ಸಾವಿರ ಎತ್ತರದಲ್ಲಿ ಇದೆ ಇಲ್ಲಿ ಅತಿಂದ್ರಿಯ ಶಕ್ತಿಯನ್ನು ಹೊಂದಿರುವ ಪರಮ ಪುರುಷರು ಹಾಗೂ ಜ್ಞಾನಿಗಳು ಹಾಗೂ ಶ್ವೇತ ದ್ವೀಪದಲ್ಲಿ ವಾಸಿಸುವವರು ಯಾವುದೇ ರೀತಿ ಆಹಾರವನ್ನು ಸೇವಿಸುವುದಿಲ್ಲ ಇಲ್ಲಿ ಇರುವವರು ಸಂಪೂರ್ಣವಾಗಿ ಬಿಳಿ ಬಣ್ಣದವರಾಗಿರುತ್ತಾರೆ ಅವರ ದೇಹದ ಮೂಳೆಗಳು ಇಂದ್ರನ ವಜ್ರಾಯುಧಷ್ಟು ಬಲಿಷ್ಠವಾಗಿರುತ್ತದೆ ಹಾಗೂ ಅವರು ಮಾತನಾಡಿದರೆ ಅವರ ಧ್ವನಿಗಳು ಗುಡುಗಿನಷ್ಟು ಜೋರಾಗಿರುತ್ತದೆ ಎಂದು (ಮಹಾಭಾರತದ ಶಾಂತಿಪರ್ವ ದಕ್ಷಿಣ ಪಾಣಿತ್ವ ಪಾಠ ಅಧ್ಯಾಯ 355 ರಲ್ಲಿ ನೀಡಲಾಗಿದೆ)
ಹಾಗೂ ಮಹಾಭಾರತದ ಶಾಂತಿ ಪರ್ವದ ಅಧ್ಯಾಯ 334,335,336, ರಲ್ಲಿಯೂ ಶ್ವೇತ ದ್ವೀಪ ಬಗ್ಗೆ ಉಲ್ಲೇಖವಿದೆ.
ರಾಮಾಯಣದಲ್ಲಿ ಈ ಶ್ವೇತ ದ್ವೀಪದ ಬಗ್ಗೆ ಉಲ್ಲೇಖವಿದೆ ಸೀತಾದೇವಿಯನ್ನು ರಾವಣನು ಅಪಹರಿಸಿಕೊಂಡು ಹೋದಾಗ ರಾಮ ಲಕ್ಷ್ಮಣರ ಸಹಾಯಕ್ಕೆ ವಾನರ ಸೇನೆ ಬರುತ್ತದೆ ಹಾಗೆ ಸೀತಾನ್ವೇಷಣೆ ಮಾಡುತ್ತಿರುವಾಗ ಕೆಲವು ವಾನರ ವೀರರು ಒಂದು ಗುವೆಯ ಒಳಗೆ ಹೋಗುತ್ತಾರೆ ನಂತರ ಅದರ ಒಳಗೆ ಹೋಗುತ್ತಾ ಅಲ್ಲಿ ಸಂಪೂರ್ಣವಾಗಿ ವಿಚಿತ್ರವಾಗಿತ್ತು ಹಾಗೂ ಅಲ್ಲಿ ಕೆಲವು ಋಷಿಗಳು ವಾಸ ಮಾಡುತ್ತಿದ್ದರು ಅವರು ಚತುರ್ಭುಜ ಆಧಾರಿಗಳಾಗಿದ್ದರು ಇದರ ಅರ್ಥ ನಾಲ್ಕು ಕೈಗಳು ಅವರುಗಳಿಗೆ ಇತ್ತು ಹಾಗೂ ಅವರು ನಮ್ಮೆಲ್ಲರಿಗೂ ಆಹಾರವನ್ನು ನೀಡಿದರು ನಂತರ ನಾವು ಅಲ್ಲಿಂದ ಹಿಂತಿರುಗಿದವು ಆದರೆ ಅವರೆಲ್ಲರೂ ತುಂಬಾ ಬಿಳಿ ಬಿಳಿ ಆಗಿದ್ದರು ನಾವು ಹಿಂತಿರುಗಿದ ನಂತರ ಮತ್ತೆ ಆ ಕಡೆ ನೋಡಿದರೆ ಅಲ್ಲಿ ಯಾವ ದ್ವಾರವು ಕೂಡ ಇರಲಿಲ್ಲ ಎಂದು ವಾನರ ವೀರರು ರಾಮ ಹಾಗೂ ಹನುಮಂತನ ಬಳಿ ಹೇಳುತ್ತಾರೆ.
ತಿರುಪತಿ ತಿಮ್ಮಪ್ಪನ ದೇವಾಲಯದಿಂದ ಶ್ವೇತ ದ್ವಿಪಕ್ಕೆ ದ್ವಾರ
ಆದರೆ ಈ ವಾನರು ಗುಹೆ ಪ್ರವೇಶ ಮಾಡಿದ ಸ್ಥಳ ತಿರುಪತಿ ಕ್ಷೇತ್ರ
ಹೌದು ತಿರುಪತಿಗೆ ತಿಮ್ಮಪ್ಪನ ಕ್ಷೇತ್ರದಿಂದ ಶ್ವೇತ ದೀಪಕ್ಕೆ ಸಂಪರ್ಕದ ದ್ವಾರ ಇದೆ ಎಂದು ಹೇಳಲಾಗುತ್ತದೆ .
ಹೌದು ಸ್ನೇಹಿತರೆ, ತಿರುಪತಿ ತಿಮ್ಮಪ್ಪನಿಗೆ ಪೂಜಿ ಸಲ್ಲಿಸಲು ಶ್ವೇತ ದೀಪದಿಂದ ಚತುರ್ಭುಜ ಧಾರಿಗಳಾದ ಯೋಗಿಗಳು ಬರುತ್ತಾರೆ ಎಂದು ಇಂದಿಗೂ ಕೂಡ ನಂಬಲಾಗಿದೆ ಹಲವು ಸಂದರ್ಭಗಳಲ್ಲಿ ಬೆಳಗಿನ ಜಾವ ತಿಮ್ಮಪ್ಪನಿಗೆ ಪೂಜಿ ಸಲ್ಲಿಸಲು ಹಾಗೂ ತಿಮ್ಮಪ್ಪನ ದ್ವಾರ ಬಾಗಿಲನ್ನು ತೆರೆದಾಗ ಅರ್ಚಕರಿಗೆ ಯಾವುದೋ ಒಂದು ಶಕ್ತಿ ದೇಹಕ್ಕೆ ಸ್ಪರ್ಶ ಮಾಡಿದ ಹಾಗೆ ಅನುಭವಗಳು ಆಗಿದೆ ಎಂದು ಹೇಳಲಾಗುತ್ತದೆ.
ಹಾಗೆ ಇಂದಿಗೂ ಕೂಡ ತಿರುಪತಿ ತಿಮ್ಮಪ್ಪನ ಸಪ್ತ ಬೆಟ್ಟಗಳಸಪ್ತ ಶ್ವೇತ ದ್ವೀಪಕ್ಕೆ ದ್ವಾರಗಳು ಇದೆ ಎಂದು ಹೇಳುತ್ತಾರೆ ಶ್ವೇತ ದ್ವೀಪದಲ್ಲಿ ವಾಸ ಮಾಡುವ ಯೋಗಿಗಳ ದೇಹದಿಂದ ಒಂದು ರೀತಿಯ ವಿಶೇಷವಾದಂತಹ ಸುವಾಸನೆ ಹೊರಹೊಮ್ಮುತ್ತದೆ ಇದೇ ಸುವಾಸನೆ ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿಯೂ ಕೂಡ ಬರುತ್ತದೆ ಎಂದು ಹೇಳುತ್ತಾರೆ ಹಾಗೆ ಚತುರ್ಭುಜ ಧಾರಿಗಳಾದ ಯೋಗಿಗಳು ತಿರುಪತಿ ತಿಮ್ಮಪ್ಪನಿಗೆ ಪ್ರತಿದಿನ ಪೂಜೆ ಸಲ್ಲಿಸುವುದರಿಂದ ತಿಮ್ಮಪ್ಪನಿಗೆ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.
ಇನ್ನು ಶ್ವೇತ ದ್ವೀಪ ತಲುಪುವುದು ಹೇಗೆ ಅಲ್ಲಿ ಯಾರೂ ವಾಸ ಮಾಡುತ್ತಾರೆ
ಶ್ವೇತ ದ್ವೀಪದಲ್ಲಿ ಯೋಗಿಗಳು ವಾಸ ಮಾಡುತ್ತಾರೆ ಹಾಗಾದರೆ ಈ ಯೋಗಿಗಳು ಯಾರು ಎಂದರೆ ಜೀವನದಲ್ಲಿ ಸಾಧನೆಯನ್ನು ಮಾಡಿ ಮುಕ್ತಿಯನ್ನು ಪಡೆದವರು ಈ ಶ್ವೇತ ದ್ವೀಪದಲ್ಲಿ ಇರುತ್ತಾರೆ ಹಾಗೂ ಭಗವಾನ್ ನಾರಾಯಣನು ಕೂಡ ಇಲ್ಲಿ ವಾಸ ಮಾಡುತ್ತಾನೆ ಶಾಸ್ತ್ರದಲ್ಲಿ ಹೇಳಿರುವಂತೆ ಭಗವಂತನ ನಿತ್ಯ ನಿವಾಶ ಎಂದು ಈ ಶ್ವೇತ ದ್ವೀಪವನ್ನು ಕರೆಯುತ್ತಾರೆ.
ಯಾರು ಮುಕ್ತಿಯನ್ನು ಹೊಂದುತ್ತಾರೋ ಅವರಿಗೆ ಮಾತ್ರ ಶ್ವೇತ ದ್ವೀಪದ ದ್ವಾರ ತೆರೆಯುತ್ತದೆ ಕ್ಷೀರಸಾಗರದ ಉತ್ತರಾದಿಕ್ಕಿನಲ್ಲಿ ಈ ಶ್ವೇತ ದ್ವೀಪವಿದೆ ಈ ದ್ವೀಪದಲ್ಲಿ ವಾಸ ಮಾಡುವ ಎಲ್ಲರ ಬಣ್ಣವೂ ಬಿಳಿ ಬಣ್ಣವಾಗಿರುತ್ತದೆ ಹಾಗೆ ಇಲ್ಲಿ ವಾಸ ಮಾಡುವವರಿಗೆ ಹಸಿವು ಬಾಯಾರಿಕೆ ಸಾವು ನೋವು ಯಾವುದೂ ಕೂಡ ಆಗೋದಿಲ್ಲ.
ಇಡೀ ಬ್ರಹ್ಮಾಂಡದಲ್ಲಿ ಶ್ವೇತ ದ್ವೀಪ ತುಂಬಾ ವಿಶೇಷವಾಗಿದೆ ಇಲ್ಲಿ ವಾಸ ಮಾಡುವವರು ಕೂಡ ತುಂಬಾ ವಿಶೇಷವಾಗಿರುತ್ತಾರೆ ಅನಂತ ಜಗತ್ತಿನ ಆನಂದ ಸ್ಥಳವೇ ಈ ಸ್ಥಳ ಶ್ವೇತಾ ದ್ವೀಪ ಎಲ್ಲಿದೆ?
ಕ್ಷೀರಪಥದಲ್ಲಿ, ಭೂಮಿಯ ಮೇಲೆ, ಪುಷ್ಕರ ದ್ವೀಪ ಮತ್ತು ಶಾಕ ದ್ವೀಪಗಳ ನಡುವೆ, ಒಬ್ಬರು 1.5 ಲಕ್ಷ ಯೋಜನಗಳನ್ನು ಕ್ರಮಿಸಿದರೆ, ಶ್ವೇತ ದ್ವೀಪವು ಕಂಡುಬರುತ್ತದೆ.
ಇನ್ನು ಶ್ವೇತ ದ್ವೀಪ ಹಿಂದುಗಳಿಗೆ ಮಾತ್ರವಲ್ಲ ಬೌದ್ಧ ಜೈನ ಧರ್ಮದಲ್ಲಿಯೂ ಕೂಡ ನಂಬಿಕೆ ಇದೆ ಪುಣ್ಯ ಮಾಡಿದ ಪುಣ್ಯಾತ್ಮರು ವೇತ ದ್ವೀಪದ ದ್ವಾರದ ಬಳಿ ಹೋಗಿ ನಿಂತರೆ ಆ ದ್ವಾರ ತೆರೆಯುತ್ತದೆ ಎಂದು ಬೌದ್ಧ ಹಾಗೂ ಜೈನ ಧರ್ಮದಲ್ಲಿ ಹೇಳಲಾಗಿದೆ.
ಯಾವ ವ್ಯಕ್ತಿ ಪಾಪಗಳಿಂದ ಮುಕ್ತನಾಗುತ್ತಾನೆ ಅವನು ವೇತನ ನಿವಾಸಿಯಾಗುತ್ತಾನೆ ಶಾಸ್ತ್ರವನ್ನು ಅರಿತವನ್ನು ಧರ್ಮವನ್ನು ಅರಿತವನು ಭಗವಂತನ ನಿತ್ಯ ನಿವಾಸ ಸೇರುತ್ತಾನೆ. ಇದೆ ಹಿಂದೂ ಧರ್ಮದ ಆಳವಾದ ನಂಬಿಕೆ ಹಿಂದು ಧರ್ಮದ ಪುರಾಣಗಳಲ್ಲಿ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿರುವ ಪ್ರತಿಯೊಂದು ವಿಚಾರಗಳಿಗೂ ವಿಷಯಗಳಿಗೂ ವೈಜ್ಞಾನಿಕವಾಗಿ ಸಾಕ್ಷಿಗಳು ಇಂದಿಗೂ ಕೂಡ ಇವೆ ಶ್ವೇತ ದ್ವೀಪದ ಬಗ್ಗೆ ಅನೇಕ ರೀತಿಯ ಚರ್ಚೆಗಳು ಇವತ್ತಿಗೂ ಕೂಡ ನಡೆಯುತ್ತಿದೆ ವಿದ್ವಾಂಸರು ಜ್ಞಾನಿಗಳು ಶ್ವೇತ ದ್ವೀಪದ ಬಗ್ಗೆ ಅನೇಕ ಸಾಕ್ಷಿಗಳನ್ನು ಸಮಾಜದ ಮುಂದೆ ತೆರೆದಿಟ್ಟಿದ್ದಾರೆ.
ಆದರೆ ಒಂದು ಮಾತ್ರ ಸತ್ಯ ಯಾರ ನಂಬಿಕೆಗೆ ಹೇಗೆ ಬೇಕೋ ಭಗವಂತ ಹಾಗೆ ದರುಶನ ಕೊಡುತ್ತಾನೆ ಯಾರು ಭಗವಂತನನ್ನ ಯಾವ ರೀತಿ ನಂಬುತ್ತಾರೋ ಭಗವಂತ ಅವರಿಗೆ ಅದೇ ರೀತಿಯಾಗಿ ಕರುಣಿಸುತ್ತಾನೆ ಭಗವಂತನ ಸೃಷ್ಟಿಯಲ್ಲಿ ಸೃಷ್ಟಿ ಆದಂತಹ ಯಾವುದೂ ಕೂಡ ಎಂದು ಕೂಡ ಸುಳ್ಳಾಗಲು ಸಾಧ್ಯವಿಲ್ಲ ಈ ಜಗತ್ತನ್ನು ನಿರ್ಮಾಣ ಮಾಡಿದ ಭಗವಂತ ಜಗತ್ತಿನಲ್ಲಿ ಏನೇನು ಇರಬೇಕು ಏನೇನು ಇರಬಾರದು ಅನ್ನೋದನ್ನು ಮೊದಲೇ ತೀರ್ಮಾನಿಸುತ್ತಾನೆ,
ಕ್ಷೀರಸಾಗರ ಅಂದರೆ ಅದು ಹಾಲಿನ ಸಮುದ್ರ ಎಂದು ಹೇಳುತ್ತಾರೆ ಅಂತಹ ಕ್ಷೀರಸಾಗರದಲ್ಲಿ ಭಗವಾನ್ ವಿಷ್ಣು ಯೋಗ ನಿದ್ರೆಯಲ್ಲಿ ಇರುತ್ತಾನೆ ಭಗವಂತನು ಲೋಕದ ಎಲ್ಲ ಒಂದೇ ಕ್ಷಣದಲ್ಲಿ ನೋಡುತ್ತಾನೆ ಎಂದು ನಂಬಲಾಗಿದೆ.
ಸ್ನೇಹಿತರೆ ಶ್ವೇತ ದ್ವೀಪದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮಹಾಭಾರತದ ಶಾಂತಿ ಪರ್ವದ ಅಧ್ಯಾಯ 334,335,336,338 ರಲ್ಲಿ ನೀಡಲಾಗಿದೆ ಹಾಗೂ ಬ್ರಹ್ಮಸಂಹಿತೆ ಅಲ್ಲಿಯು ಕೂಡ ನೀಡಲಾಗಿದೆ ಹಾಗೂ ತಿರುಪತಿಗೆ ಸಂಬಂಧಪಟ್ಟ ಹಲವು ಗ್ರಂಥ ಪುರಾಣಗಳಲ್ಲಿ ಶ್ರೀನಿವಾಸನ ಮಹಿಮೆಯ ಗ್ರಂಥದಲ್ಲಿಯೂ ನೀಡಲಾಗಿದೆ ಶ್ವೇತ ದ್ವೀಪದ ಬಗ್ಗೆ ಮಾಹಿತಿ ಬೇಕಾದವರು ಈ ಗ್ರಂಥಗಳನ್ನು ಓದಬಹುದು.
ನಿತ್ಯ ಧ್ವನಿ ಇಲ್ಲಿ ನೀಡಿರುವ ಮಾಹಿತಿಗಳು ಮಹಾಭಾರತದಿಂದ ಹಾಗೂ ಸ್ಕಂದ ಹಾಗೂ ಇನ್ನಿತರೆ ಗ್ರಂಥ ಹಾಗೂ ಹಿರಿಯರ ಮಾರ್ಗದರ್ಶನದಿಂದ ಪಡೆದ ಮಾಹಿತಿಯಾಗಿದೆ.